ಹೊನ್ನಾವರ ಆ.19 : ತಾಲೂಕಿನ ಮಾಳ್ಕೋಡ ಮೂಲದ , ಮೈಸೂರಿನಲ್ಲಿ ನೆಲೆಸಿರುವ ಸಾರಿಗೆ ಮತ್ತು ಉದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧ ರಾದ ಯಶೋಧರ ಗಣಪ ನಾಯಕ ತಮ್ಮ 69ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಮುಂಬೈ ಕೋಕಿಲಾ ಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ದಿ.19ರಂದು ಬೆಳಿಗ್ಗೆ ನಿಧನರಾದರು.”ಉದ್ಯೋಗ ರತ್ನ”ಪ್ರಶಸ್ತಿ ಪಡೆದಿದ್ದರು. ಇವರು ಎರಡುಬಾರಿ ವಿಧಾನಸಭಾ ಚುನಾವಣೆಗೆ ನಿಂತು ಸೋತಿದ್ದರೂ ಬೇಸರಿಸದೇ ಎರಡು ದಶಕಗಳ ಕಾಲ ಹೊನ್ನಾವರ,ಕುಮಟಾ,ಭಟ್ಕಳ ತಾಲೂಕಿಗೆ ತಮ್ಮ ಟ್ರಸ್ಟ್ ಮುಖಾಂತರ ಹಲವು ಸೇವೆ ನೀಡಿದ್ದಾರೆ. ಪತ್ನಿ,ಮಕ್ಕಳು ,ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ..



