ಭಟ್ಕಳ ಆ. 18: ತಾಲೂಕು ಮುಂಡಳ್ಳಿ ಗ್ರಾಮದ ನೀರಗದ್ದೆಯಲ್ಲಿ ನಡೆದ ಎಮ್ಮೆ ಕಡಿದು ತಲೆ ಎಸೆದ ಪ್ರಕರಣದ ಎ-1 ಆರೋಪಿಯಾದ ಅಬ್ದುಲ್ ಅಲಿಂ ಮೊಹಮ್ಮದ ಸಾವುದ್ದಿನ್ ಜಬಾಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ನಂತರ ಒಂದೂವರೆ ತಿಂಗಳಿನಿಂದ ಆರೋಪಿ ತಲೆಮರೆಸಿಕೊಂಡಿದ್ದನು. ಶೋಧ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು, ಬೆಂಗಳೂರಿನ ಆರ್.ಟಿ. ನಗರದಲ್ಲಿ ಅವನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ಭಟ್ಕಳಕ್ಕೆ ಕರೆತಂದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದಲ್ಲಿ ಬಳಸಲಾದ ಎರಡು ಬೈಕ್‌ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸ್‌ಐ ರಾಜೇಶ್ ಹಾಗೂ ನಾರಾಯಣ, ಸಿಬ್ಬಂದಿಯಾದ ಶ್ರೀಪಾದ ಮತ್ತು ವಿನೋದ ಕುಮಾರರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.



