“ಟ್ರಾಫಿಕ್ ಜಾಮ್ ಮುರಿದು ಅಂಬುಲೆನ್ಸ್‌ಗೆ ಜೀವದ ದಾರಿ ಮಾಡಿಕೊಟ್ಟ ಮಹಿಳಾ ಪೊಲೀಸ್ ಅಧಿಕಾರಿ”

ತಿರುವನಂತಪುರ: ವಾಹನಗಳ ಉದ್ದನೆಯ ಸಾಲು, ಭಾರೀ ಟ್ರಾಫಿಕ್ ಜಾಮ್… ಈ ಟ್ರಾಫಿಕ್ ಜಾಮ್ ಮಧ್ಯೆ ನಿರಂತರವಾಗಿ ಕೇಳುತ್ತಿದ್ದ ಅಂಬುಲೆನ್ಸ್ ಸೈರನ್ ಸದ್ದು… ಇದರ ಮಧ್ಯೆ ಓಡೋಡಿ ಬರುತ್ತಿರುವ ಪೊಲೀಸ್ ನಗರದಲ್ಲಿ ಎಎಸ್‌ಐ ಅಪರ್ಣಾ ಲವ್ ಕುಮಾರ್ ರಸ್ತೆಯಲ್ಲಿ ಕಿ.ಮೀಗಟ್ಟಲೇ ಓಡಿ ಟ್ರಾಫಿಕ್ ಕ್ಲಿಯರ್ ಮಾಡಲು ಪ್ರಯತ್ನ ಪಟ್ಟಿದ್ದಾರೆ.

ಈ ದೃಶ್ಯ ಈಗ ವೈರಲ್ ಆಗಿದ್ದು, ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಎಲ್ಲರೂ ಸೆಲ್ಯೂಟ್ ಅನ್ನುತ್ತಿದ್ದಾರೆ. ವೈದ್ಯಕೀಯ ಕಾಲೇಜಿನಿಂದ ತ್ರಿಶೂರ್‌ನ ಜುಬಿಲಿ ಆಸ್ಪತ್ರೆಗೆ ರೋಗಿ ಶಿಫ್ಟ್ ಆಗಬೇಕಾಗಿತ್ತು. ಕೊನೆಗೆ ಇವರ ಸಮಯ ಪ್ರಜ್ಞೆಯಿಂದ ರೋಗಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದೆ.

ಇನ್ನು ಈ ಪೊಲೀಸ್ ಅಧಿಕಾರಿ ಈ ಹಿಂದೆ ದುಡ್ಡಿನ ಕೊರತೆಯಿಂದ ಮಹಿಳೆಯ ಮೃತದೇಹ ನೀಡದ್ದಕ್ಕೆ ತನ್ನ ಬಂಗಾರದ ಬಳೆಯನ್ನು ನೀಡಿ ಗಿರವಿ ಇಡಲು ಹೇಳಿ ದುಡ್ಡಿನ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಕ್ಯಾನ್ಸರ್ ರೋಗಿಗಳಿಗೆ ತಲೆಗೂದಲನ್ನು ಕೂಡ ದಾನ ಮಾಡಿ ಗಮನ ಸೆಳೆದಿದ್ದರು.