ರಾಮನಗರ: ‘ನಮಗೇನು ಮೊಟ್ಟೆ ಎಸೆಯಲು ಬರಲ್ವಾ’ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ರಾಮನಗರದಲ್ಲಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅವರ ಸಂಸ್ಕೃತಿ ಏನು ಎಂಬುದನ್ನ ತೋರಿಸುತ್ತೆ
ಅವರು ಪ್ರಚೋದನೆ ನೀಡುತ್ತಿದ್ದಾರೆ. ನಾವು ಮೊಟ್ಟೆ ಎಸೆತ ಪ್ರಕರಣವನ್ನ ಖಂಡಿಸಿದ್ದೇವೆ. ಆ ಘಟನೆಯನ್ನ ನಾವು ಯಾರೂ ಕೂಡಾ ಸಮರ್ಥಿಸಿಕೊಂಡಿಲ್ಲ. ಈಗ ಡಿ.ಕೆ.ಶಿವಕುಮಾರ್ ಪ್ರಚೋದನೆ ಹೇಳಿಕೆ ನೀಡುತ್ತಿದ್ದಾರೆ. ಇದೇ ನಮಗೂ ಕಾಂಗ್ರೆಸ್ ನವರಿಗೂ ಇರುವ ವ್ಯತ್ಯಾಸ ಎಂದು ಕಿಡಿಕಾರಿದ್ದಾರೆ. ರಾಮನಗರದಲ್ಲಿ ಡಿಕೆಶಿ ಹೇಳಿಕೆಗೆ ಸಚಿವ ಅಶ್ವಥ್ ನಾರಾಯಣ್ ಟಾಂಗ್ ಕೋಟ್ಟಿದ್ದಾರೆ.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪಶ್ಚಾತಾಪ ವಿಚಾರವಾಗಿಯೂ ಮಾತನಾಡಿದ ಅಶ್ವಥ್ ನಾರಾಯಣ್ ಸಮಾಜದಲ್ಲಿ ತಪ್ಪು ಮಾಡುವುದು ಸಹಜ. ಮಾಡಿದ ತಪ್ಪನ್ನ ಸರಿಪಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಈಗ ಸಿದ್ದರಾಮಯ್ಯ ಪಶ್ಚಾತಾಪ ಪಟ್ಟಿಲ್ಲ ಎನ್ನಬಹುದು. ಆದರೆ ಶ್ರೀಗಳ ಮಾತು ನಂಬಬೇಕಾ, ಇಲ್ಲಾ ಸಿದ್ದರಾಮಯ್ಯ ಮಾತು ನಂಬಬೇಕಾ.? ಸ್ವಾರ್ಥಕ್ಕಾಗಿ ರಾಜಕೀಯ ಮಾಡಬಾರದು. ಸಮಾಜ ಅವರನ್ನ ನೋಡುತ್ತಿದೆ. ಈಗ ಹೇಳಿಕೆ ಬದಲಿಸಿಕೊಂಡರೆ ಅದು ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗಲಿದೆ. ಇವರು ಹೇಳಿದನ್ನೆಲ್ಲ ನಂಬಬಾರದು ಎಂಬ ಭಾವನೆ ಜನರಲ್ಲಿ ಬರುತ್ತದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ.