ಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು  ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಮೋಘ ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2025-26 ನೇ ಸಾಲಿನ ಕುಮಟಾ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

 ಬಾಲಕರ ವಿಭಾಗ:
ಚಕ್ರ ಎಸೆತ ಹಾಗೂ ಜಾವಲಿನ್ ಎಸೆತದಲ್ಲಿ ಎಚ್. ಡಿ. ನಿರಂಜನ ಪ್ರಥಮ ಸ್ಥಾನ, ಕರಾಟೆಯಲ್ಲಿ ಪ್ರಥ್ವಿನ್ ಪ್ರಥಮ ಸ್ಥಾನ, ಯೋಗದಲ್ಲಿ ದರ್ಶನ, ಸಮೀರ ಹಾಗೂ ಪುಂಡರಿಕ ಪ್ರಥಮ ಸ್ಥಾನ, ಚೇಸ್ ನಲ್ಲಿ ಚೇತನ, ಅಕ್ಷಯ ಹಾಗೂ ಪ್ರಣೀತ ಪ್ರಥಮ ಸ್ಥಾನ, ಸ್ವಿಮ್ಮಿಂಗನ ವಿವಿಧ ವಿಭಾಗದಲ್ಲಿ ಕಾರ್ತಿಕ, ಆರ್ಯನ್ ಹಾಗೂ ಸಮೀರ ಪ್ರಥಮ ಸ್ಥಾನಗಳಿಸಿರುತ್ತಾರೆ. 3000 ಮೀ. ಓಟದಲ್ಲಿ ಯುವರಾಜ ದ್ವಿತೀಯ ಸ್ಥಾನ, ಗುಂಡು ಎಸೆತದಲ್ಲಿ ಏಕನಾಥ ದ್ವಿತೀಯ ಸ್ಥಾನ, ಚಕ್ರ ಎಸೆತದಲ್ಲಿ ಅನ್ಮೊಲ್ ದ್ವಿತೀಯ ಸ್ಥಾನ, ಹರ್ಡಲ್ಸ್ ನಲ್ಲಿ ಮನೋಜ ದ್ವಿತೀಯ ಸ್ಥಾನ, ಸ್ವಿಮ್ಮಿಂಗನ ವಿವಿಧ ವಿಭಾಗದಲ್ಲಿ ಸಮೀರ, ಕಾರ್ತಿಕ, ಆರ್ಯನ್, ನಿಖಿಲ್ ಹಾಗೂ ಪುಂಡರಿಕ ದ್ವಿತೀಯ ಸ್ಥಾನಗಳಿಸಿದ್ದಾರೆ. ಶಟಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ, ತ್ರಿವಿಧ ಜಿಗಿತದಲ್ಲಿ ನಿಖಿಲ್ ತೃತೀಯ ಸ್ಥಾನ, 200ಮೀ. ಓಟದಲ್ಲಿ ಆರ್ಯನ್ ತೃತೀಯ, 4 × 100 ಮೀ. ರೀಲೆ, ಟೇಬಲ್ ಟೆನ್ನಿಸ್ ಹಾಗೂ ಥ್ರೋ ಬಾಲ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿ ಅಮೋಘ ಪ್ರದರ್ಶನ ನೀಡಿರುತ್ತಾರೆ.

ಬಾಲಕಿಯರ ವಿಭಾಗ:
ಉದ್ದ ಜಿಗಿತದಲ್ಲಿ ತೇಜಾ ಪ್ರಥಮ ಸ್ಥಾನ, ಯೋಗದಲ್ಲಿ ಪಾವನಿ, ಇಂಚರಾ ಹಾಗೂ ಅಪೇಕ್ಷಾ ಪ್ರಥಮ ಸ್ಥಾನ, ಚೆಸ್ ನಲ್ಲಿ ಶಮಿತಾ ಪ್ರಥಮ ಸ್ಥಾನ, ಸ್ವಿಮ್ಮಿಂಗನಲ್ಲಿ ಶ್ರದ್ಧಾ ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ಯೋಗಿತಾ ದ್ವಿತೀಯ ಸ್ಥಾನ, ಚಕ್ರ ಎಸೆತದಲ್ಲಿ ಯೋಗಿತಾ ದ್ವಿತೀಯ ಸ್ಥಾನ, 200ಮೀ. ಓಟದಲ್ಲಿ  ತೇಜಾ ದ್ವಿತೀಯ ಸ್ಥಾನ, ಸ್ವಿಮ್ಮಿಂಗನಲ್ಲಿ ಆಧ್ಯಾ ದ್ವಿತೀಯ ಸ್ಥಾನ ಹಾಗೂ 4 × 100ಮೀ. ರೀಲೆ, ವಾಲಿಬಾಲ್, ಥ್ರೋಬಾಲ್ ಮತ್ತು ಶಟಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಥಮ ಸ್ಥಾನಗಳಿಸುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಗುಂಡು ಎಸೆತದಲ್ಲಿ ಶಕ್ತಿ ತೃತೀಯ ಸ್ಥಾನ, 200ಮೀ ಓಟದಲ್ಲಿ ಭಾವನಾ ತೃತೀಯ ಸ್ಥಾನ, ಎತ್ತರ ಜಿಗಿತದಲ್ಲಿ ಓಹಿಲೇಶ್ವರಿ  ತೃತೀಯ ಸ್ಥಾನ ಗಳಿಸಿ ಉತ್ತಮ ಪ್ರದರ್ಶನ ನೀಡಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿ, ಪ್ರಾಚಾರ್ಯರಾದ ಕಿರಣ ಭಟ್ಟ, ಉಪಪ್ರಾಚಾರ್ಯರಾದ ಸುಜಾತಾ ಹೆಗಡೆ, ಕ್ರೀಡಾ ವಿಭಾಗದ ಉಪನ್ಯಾಸಕರಾದ ದಿಪೇಶ್ವರ ಹರಿಕಾಂತ್ರ, ಸೋಮನಾಥ ಗೌಡ, ಲತಾ ಮೇಸ್ತಾ, ಜ್ಯೋತಿ ಭಟ್ಕೆರೆ,  ಸಹನಾ ಗಾಂವ್ಕರ್, ದೈಹಿಕ ಶಿಕ್ಷಕರಾದ ಜಯರಾಜ ಶೇರುಗಾರ, ನಾಗರಾಜ ಭಂಡಾರಿ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಶುಭಕೋರಿದ್ದಾರೆ.