ಭಾರತದಲ್ಲಿ 98 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್ – ಕಂಪನಿಯಿಂದ ಅಧಿಕೃತ ಪ್ರಕಟಣೆ

ಬೆಂಗಳೂರು (ಆ. 06): ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ಆ್ಯಪ್ ಭಾರತದಲ್ಲಿ ಮತ್ತೊಮ್ಮೆ ದೊಡ್ಡ ಕ್ರಮ ಕೈಗೊಂಡಿದೆ. ಜೂನ್‌ ತಿಂಗಳಲ್ಲಿ, 98 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಮೆಟಾ ತನ್ನ ನಿಯಮಾನುಸರಣಾ ವರದಿಯಲ್ಲಿ ತಿಳಿಸಿದೆ.ವಾಟ್ಸ್ಆ್ಯಪ್‌ ಹೇಳಿಕೆಯ ಪ್ರಕಾರ, ಈ ಖಾತೆಗಳನ್ನು ದುರುಪಯೋಗ, ವದಂತಿಗಳ ಹರಿವು, ನಿಯಮ ಉಲ್ಲಂಘನೆ ಮತ್ತು ಅಪಾಯಕಾರಿಯಾದ ವರ್ತನೆಗಳನ್ನು ತಡೆಯುವ ಉದ್ದೇಶದಿಂದ ಬ್ಯಾನ್ ಮಾಡಲಾಗಿದೆ.

ಈ ವೇಳೆ, ಬಳಕೆದಾರರಿಂದ 16,000ಕ್ಕೂ ಅಧಿಕ ನಿಷೇಧ ಸಂಬಂಧಿತ ದೂರುಗಳು ಬಂದಿದ್ದು, ಅವುಗಳ ಆಧಾರದ ಮೇಲೆ 16,069 ಖಾತೆಗಳನ್ನು ತಕ್ಷಣ ನಿರ್ಬಂಧಿಸಲಾಗಿದೆ. ಜೊತೆಗೆ, 19.79 ಲಕ್ಷ ಖಾತೆಗಳ ಬಗ್ಗೆ ತಾಂತ್ರಿಕ ಅಥವಾ ಕಂಟೆಂಟ್ ಸಮಸ್ಯೆಗಳಿಂದ ಬಳಕೆದಾರರು ವರದಿ ಸಲ್ಲಿಸಿದ್ದರು.

ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್, 2021 ಅಡಿಯಲ್ಲಿ ವಾಟ್ಸ್ಆ್ಯಪ್ ಈ ಕ್ರಮಗಳನ್ನು ಕೈಗೊಂಡಿದ್ದು, ಜೂನ್ ತಿಂಗಳಲ್ಲಿ ಒಟ್ಟಾರೆ 23,596 ದೂರುಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ, 1,001 ಖಾತೆಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ.ಅಂತೆಯೇ, ನಿಷೇಧ ಸಂಬಂಧಿತ 756 ಖಾತೆಗಳನ್ನು ನಿರ್ಬಂಧಿಸಲಾಗಿದ್ದು, ಉಳಿದ ದೂರುಗಳು ಖಾತೆ ಸಹಾಯ, ಉತ್ಪನ್ನ ಸಂಬಂಧಿತ ವಿಚಾರಗಳು ಹಾಗೂ ಸುರಕ್ಷತೆ ಕುರಿತಾದ ಪ್ರಶ್ನೆಗಳಿಗೆ ಸಂಬಂಧಿಸಿದ್ದಾಗಿ