
ಹಿರೇಗುತ್ತಿ:“ಪ್ರತಿಯೊಬ್ಬರು ತಾವು ಬೆಳೆದು ಬಂದ ಸಮಾಜ ಕಲಿತ ಶಾಲೆಗಳ ಋಣ ತೀರಿಸಲು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು” ಎಂದು ಕುಮಟಾದ ಭಾರತಿ ಸಂಸ್ಥೆ ಅಧ್ಯಕ್ಷೆ ವಿನುತಾ ಎನ್.ವಿ ಕರೆ ನೀಡಿದರು.
ಅವರು ಸರ್ಕಾರಿ.ಹಿರಿಯ ಪ್ರಾಥಮಿಕ.ಶಾಲೆ ಹಿರೇಗುತ್ತಿಯಲ್ಲಿ ಭಾರತಿ ಸಂಸ್ಥೆ ಕುಮಟಾ ಇವರು ಶಾಲೆಗೆ ನೀಡಿರುವ ಉಚಿತ ಪ್ರಿಂಟರ್ ವಿಥ್ ಸ್ಕ್ಯಾನರನ್ನು ಮುಖ್ಯಾಧ್ಯಾಪಕರಾದ ಆನಂದ ಗಾoವಕರ ರವರಿಗೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಾಧ್ಯಾಪಕ ಆನಂದು ಗಾಂವಕರ ಹಾಗೂ ನಿವೃತ್ತ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಉದ್ದಂಡ.ಬಿ. ಗಾಂವಕರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು, ಶಾಲೆಯ ಹಳೆಯ ವಿದ್ಯಾರ್ಥಿ ಬಾಳಿಗಾ ಕಾಲೇಜ ಪ್ರೊಫೆಸರ್ ಡಾ.ಅರವಿಂದ ಸುರೇಶ ನಾಯಕ. ರಾಮು ಕೆಂಚನ್ ಹಿರೇಗುತ್ತಿ. ಎಸ್. ಡಿ. ಎಂ. ಸಿ ಅಧ್ಯಕ್ಷ ಮಾದೇವ ಪಟಗಾರ ಹೊನ್ನಾವರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಜಿ. ನಾಯ್ಕ ಶಿಕ್ಷಕರಾದ ವಿಷ್ಣು ನಾಯ್ಕ ಪ್ರಭಾಕರ್ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಆಶಾ ನಾಯಕ ಮಂಗಲಾ ನಾಯಕ ಕವಿತಾ ಪಟಗಾರ ಪುಷ್ಪ ಹಳ್ಳೆರ ಸುಶ್ಮಿತಾ ಪಟಗಾರ ಮೊದಲಾದವರು ಸಹಕರಿಸಿದರು.
