ರಾಷ್ಟ್ರೀಯ ಹೆದ್ದಾರಿ ಮಿರ್ಜಾನ ಬಳಿ ಬೈಕ್‌ & ಕಾರು ನಡುವೆ ಅಪಘಾತ, ಬೈಕ್ ಸವಾರ ಗಂಭೀರ

ಕುಮಟಾ : ರಾಷ್ಟ್ರೀಯ ಹೆದ್ದಾರಿ 66ರ ಮಿರ್ಜಾನ ಸಮೀಪದ ಕುದುರೆ ಹಳ್ಳದ ಬಳಿ ಅಪಘಾತ ನಡೆದಿದ್ದು, ಬೈಕ್‌ ಸವಾರ ಹಾಗೂ ಕಾರು ಚಾಲಕ ಗಾಯಗೊಂಡಿದ್ದಾರೆ.

ಗೋವಾದಿಂದ ಹೈದ್ರಬಾದ್‌ಗೆ ತೆರಳುತ್ತಿದ್ದ ಕಾರು ಹಾಗೂ ಹೊನ್ನಾವರದಿಂದ ಗೋವಾದ ಪಣಜಿಗೆ ತೆರಳು ಬೈಕ್‌ ನಡುವೆ ಅಪಘಾತ ನಡೆದಿದ್ದು ಈ ಘಟನೆಯಲ್ಲಿ ಬೈಕ್ ಸವಾರ ಜೀವನ್ ಮೇಸ್ತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಕಾರಿನಲ್ಲಿದ್ದ ಹೈದ್ರಾಬಾದ ಮೂಲದ ಐವರ ಪೈಕಿ ಇಬ್ಬರೂ ಗಾಯಗೊಂಡಿದ್ದಾರೆ. ಬೈಕ್ ಸವಾರ ಜೀವನ್ ಮೇಸ್ತಾ ಹೊನ್ನಾವರದಲ್ಲಿರುವ ತನ್ನ ಮಾವನ ಮನೆಯಿಂದ ಪಣಜಿಗೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಕಾರು ಸಹ ನುಜ್ಜುಗುಜ್ಜಾಗಿದೆ.