
ಹೊನ್ನಾವರ: ಕಿರುತೆರೆ ಹಾಗೂ ಚಲನಚಿತ್ರದಲ್ಲಿ ಪಾತ್ರ ನಿರ್ವಹಿಸಿದ ತಾಲೂಕಿನ ಕಿರಣ ರತ್ನಾಕರ ನಾಯ್ಕ ಇವರನ್ನು ಕರ್ನಾಟಕ ನಾಟಕ ಅಕಾಡಮಿ ೨೦೨೫ ರ ಸಾಲಿನ ಜೀವಮಾನ ಸಾಧನೆಗೆ ಬಿ.ಆರ್ ಅರಶಿನಕೋಡಿ ದತ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಕಿರಣ ನಾಯ್ಕ ಇವರು ರತ್ನಾಕರ ಮತ್ತು ಲಕ್ಷ್ಮೀ ದಂಪತಿಗಳ ಮಗನಾಗಿದ್ದು, ಹೊನ್ನಾವರದ ಸೇಂಟ್ ಅಂಟೋನಿ ಪ್ರೌಢ
ಶಾಲೆ ಹಾಗೂ ಎಸ್.ಡಿ.ಎಂ ಪದವಿ ಕಾಲೇಜಿನ ಪೂರ್ವ ವಿಧ್ಯಾರ್ಥಿಯಾಗಿದ್ದಾರೆ. ನಿನಾಸಂ ರಂಗ ಶಿಕ್ಷಣ ಕೇಂದ್ರ ಹೆಗ್ಗೋಡ್‌ನಿಂದ ಡಿ.ಟಿ.ಎ ತರಬೇತಿಯನ್ನು ಕುವೆಂಪು ವಿ.ವಿ ಇಂದ ಪಿ.ಜಿ.ಡಿ ಪದವಿಯನ್ನು, ಬೆಂಗಳೂರು ವಿ.ವಿಯಿಂದ ಎಂ.ಎ ಪದವಿಯನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿ ಜೀವನದಿಂದಲೂ ರಂಗಾಸಕ್ತರಾದ ಕಿರಣ ನಾಯ್ಕ ಬಂಡಾಯ ಸಾಹಿತಿ ಡಾ. ಜಿ.ಎಸ್ಅವಧಾನಿ ಬರೆದ ದೇವರ ಹೆಣ ನಾಟಕದಲ್ಲಿ ಪಾತ್ರವಹಿಸಿ ಅಂತರ್ ಕಾಲೇಜ್ ಯುವ ಜನ ಉತ್ಸವದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದರು. ಅವರು ಪು.ತಿ.ನ ವಿರಚಿತ ಹಂಸದಮಯಂತಿ, ಲಂಕೇಶ ವಿರಚಿತ ಬಿರುಕು, ಕುವೆಂಪು ವಿರಚಿತ ಸ್ಮಶಾನ ಕುರುಕ್ಷೇತ್ರಂ ಸೇರಿದಂತೆ ಕೆ.ವಿ ಅಕ್ಷರ ಮತ್ತು ಕೆ.ವಿ ಸುಬ್ಬಣ ನಿರ್ದೇಶನದ ಹಲವಾರು ನಾಟಕಗಳಲ್ಲಿ ಪಾತ್ರವಹಿಸಿದ್ದರು. ಉತ್ತಮ ತಾಂತ್ರೀಕ ವಿನ್ಯಾಸ ಕಾರರಾಗಿರುವ ಕಿರಣ ಅವರು
ಕೆ.ವಿ ಅಕ್ಷತ್ ನಿರ್ದೇಶನದ ಸಂಸಾರದಲ್ಲಿ ಸ.ನಿ.ದ.ಪ, ರುಸ್ಥುಮ್ ಬರುಚಾ ನಿರ್ದೇಶನದ ಶಾಕುಂತಲಾ ಮುಂತಾದ ನಾಟಕಗಳಲ್ಲಿ ತಾಂತ್ರೀಕ ವಿನ್ಯಾಸಕಾರರಾಗಿ ಸೇವೆ ಸಲ್ಲಿಸಿದ್ದರು. ಹಲವಾರು ಬೇಸಿಗೆ ಶಿಭಿರಗಳನ್ನು ಮಕ್ಕಳಿಗಾಗಿ, ಹಿರಿಯರಿಗಾಗಿ , ಶಿಕ್ಷಕರಿಗಾಗಿ ನಡೆಸಿದ್ದರು.
ಚಂದನ ವಾಹಿನಿಯಲ್ಲಿ ಡಾ. ಚಂದ್ರಶೇಖರ ಕಂಬಾರ ನಿರ್ದೇಶನದ ಸಾವಿರದ ಶರಣವ್ವ ದಾರವಾಹಿಯಲ್ಲಿ, ಟಿ.ಎಸ್ ನಾಗಾಭರಣ ಅವರ ಗೆಳತಿ,
ಏಣಗಿ ನಟರಾಜ ಅವರ ಕಿನ್ನರಿ, ಇದು ಎಂತ ಲೋಕವಯ್ಯ,ಹಯವಧನ ಅವರ ಶುಭಮಂಗಳ, ನೂರೆಂಟು ಸುಳ್ಳು,ಅಳಗುಳಿ ಮನೆ, ಜೊತೆ ಜೊತೆಯಲಿ, ಮತ್ತೆ ವಸಂತ, ಮುದ್ದುಮಣಿಗಳು ಮುಂತಾದ ೪೫ಕ್ಕೂಅಧಿಕ ದಾರವಾಹಿಗಳಲ್ಲಿಯೂಪಾತ್ರ ನಿರ್ವಹಿಸುವ ಮೂಲಕಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಕೈವಾರ ತಾತಯ್ಯ, ಜೂಲಿ,ಜಟ್ಟ, ಲೂಸಿಯಾ, ಪಾಪಸ್ಕಳ್ಳಿ, ತುಂಡು ಹೈಕಳ ಸಹವಾಸ,ಅಮರಾವತಿ, ಗೋಧಿಬಣ್ಣಸಾಧಾರಣ ಮೈಕಟ್ಟು, ಕವಲುದಾರಿ, ಚೂರಿ ಕಟ್ಟೆ, ಅವನೇಶ್ರೀಮನ್ನಾರಾಯಣ, ೭೭೭ಚಾರ್ಲಿ, ಬೊಲ್ ಪೆನ್,ಜೋರ್ಡಾನ್, ಆತ್ಮ ಸಾಕ್ಷಿ ಸೇರಿದಂತೆ ೨೦ಕ್ಕೂ ಅಧಿಕ ಕನ್ನಡ ತಮಿಳು ಸೇರಿದಂತೆ ವಿವಿಧಭಾಷೆಯ ಚಲನ ಚಿತ್ರಗಳಲ್ಲಿಅಭಿನಯಿಸಿದ್ದಾರೆ.ಅವರ ಸಾಧನೆಯನ್ನುಗುರುತಿಸಿ ರಾಜ್ಯ ನಾಟಕ
ಅಕಾಡಮಿ ಅವರನ್ನು ಬಿ.ಆರ್ ಅರಶಿನಕೋಡಿ ದತ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ತಾಲೂಕಿನ ಜನತೆಗೆ ಸಂತಸ ತಂದಿದೆ.


