ಜಿಲ್ಲೆಗೆ ಉಪಯುಕ್ತವಾಗುವಂತೆ ರೈಲು ಓಡಿಸಲು ಸಂಘಟನೆಯ ಆಗ್ರಹ

ಹೊನ್ನಾವರ ಜು. 24: ಕೋವಿಡ್‌ಗೂ ಮೊದಲು ಕೇರಳ ಮಾರ್ಗವಾಗಿ ಜಮ್ಮು-ಕಾಶ್ಮೀರಕ್ಕೆ ನವಯುಗ ಟ್ರೈನ ಓಡಾಡುತ್ತಿತ್ತು. ನಿಂತು ಹೋದ ಈ ರೈಲನ್ನು ಮುಂದಿನ ದಿನಗಳಲ್ಲಿ ಈ ನವಯುಗ ಎಕ್ಷಪ್ರೆಸ್ ಟ್ರೈನನ್ನು ಓಡಿಸುವಾಗ ಮಂಗಳೂರು-ಮಡಗಾಂವ ಮೇಲೆ ಜಮ್ಮು ಕಾಶ್ಮೀರಕ್ಕೆ ಓಡಾಡುವಂತೆ ನಮ್ಮ ಜನಪ್ರಿಯ ಸಂಸದರು ಪ್ರಯತ್ನಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ರೇಲ್ವೆ ಸೇವಾ ಸಮಿತಿಯ ಆಗ್ರಹಿಸಿದೆ.

ಹೆಚ್ಚಿನ ರೈಲುಗಳು ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್‌ಗೆ ಸೀಮಿತವಾಗಿದೆ ಕರಾವಳಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ತಿರುಪತಿ-ಮುರುಡೇಶ್ವರ ಎರಡು ತಾಸಿನ ಗಡುವಿದ್ದರೂ ಮುರ್ಡೇಶ್ವರದಲ್ಲಿಯೇ ನಿಲ್ಲುತ್ತದೆ ಅದನ್ನು ಮುಂದುವರಿಸಿ ಕುಮಟಾಕ್ಕೆ ಬಂದರೆ ಗೋಕರ್ಣ-ತಿರುಪತಿ ಧಾರ್ಮಿಕ ಕ್ಷೇತ್ರಗಳಿಗೆ ಕೊಂಡಿಯಾಗಿ ಭಕ್ತಜನಕ್ಕೆ ಅನೂಕೂಲವಾಗುವುದು. ಮೊದಲನೆಯದಾಗಿ ಬೆಂಗಳೂರು-ಮುರ್ಡೇಶ್ವರ ಟ್ರೈನ್‌ನ್ನು ವಾಸ್ಕೊತನಕ ಮುಂದುವರಿಸಲು ಅನುಮೋದನೆ ಆಗಿದ್ದರು ಇಲ್ಲಿಯ ತನಕ ನೆನೆಗುದ್ದಿಗೆ ಬಿದ್ದಿದೆ ಈ ಸೌಲಭ್ಯ ಕೂಡಾ ಕೂಡಲೇ ಆಗಬೇಕಿದೆ.

 ಸಂಸದ ಕಾಗೇರಿಯವರು ಈ ಕುರಿತು ಆಸಕ್ತಿ ವಹಿಸಬೇಕಾಗಿದೆ. ಅಂತೇಯೆ ಹಾರವಾಡದಲ್ಲಿ ಫ್ಲಾಟ್‌ಫಾರ್ರ್ ಮತ್ತು ಗೋಕರ್ಣದಲ್ಲಿ ಎರಡು ಬದಿ ಫ್ಲಾಟ್‌ಫಾರ್ರ್ ವಿಸ್ತರಿಸುವ ಕಾರ್ಯವು ಶೀಘ್ರವಾಗಿ ಆಗಲು ಮಾನ್ಯರು ಪ್ರಯತ್ನಿಸಬೇಕಿದೆ. ತಮ್ಮ ಈ ಅವಧಿಯಲ್ಲಿ ಆಗುವ ಅಭಿವೃದ್ಧಿ ಕಾರ್ಯಗಳು ನಮಗೆ ಶ್ರೀರಕ್ಷೆ ಎಂಬುದು ಉತ್ತರ ಕನ್ನಡ ಜಿಲ್ಲಾ ರೇಲ್ವೆ ಸೇವಾ ಸಮಿತಿಯ ಅಭಿಮತವಾಗಿದೆ ಎಂದು ಸಮಿತಿ ಅಧ್ಯಕ್ಷರಾದ ಜಾರ್ಜ್ ಫರ್ನಾಂಡಿಸ್, ಉಪಾಧ್ಯಕ್ಷರು ವೆಂಟುಮಾಸ್ಟರ್ ಶೀಳ್ಯ ಕಾರ್ಯದರ್ಶಿ ರಾಜೀವ್ ಗಾಂವಕರ, ಚಂದ್ರಹಾಸ ನಾಯಕ ಗೋಕರ್ಣ ತಿಳಿಸಿದ್ದಾರೆ.