ಬಾಲಕಿಗೆ ಪಾಗಲ್‌ ಪ್ರೇಮಿ ಲವ್‌ ಟಾರ್ಚರ್‌ – ಜನರ ಎದುರೇ ಹುಡುಗಿ ಕುತ್ತಿಗೆಗೆ ಚಾಕು ಹಿಡಿದು ಬೆದರಿಕೆ

ಸತಾರಾ, ಜುಲೈ 22: ಇಲ್ಲೊಬ್ಬ ಪಾಗಲ್ ಪ್ರೇಮಿ ಅಪ್ರಾಪ್ತ ಬಾಲಕಿಗೆ ಚಾಕು ತೋರಿಸಿ ಪ್ರೀತಿಸುವಂತೆ ಬೆದರಿಕೆ ಹಾಕಿ, ಹಲ್ಲೆ ಮಾಡಿರುವ ಘಟನೆ ನಡೆದಿದೆ. ಆ ಬಾಲಕಿಗೆ ಆತ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ ಅದೂ ಹಾಡಹಗಲಲ್ಲಿ. ಆದರೆ ಆಗಬೇಕಾದ ದೊಡ್ಡ ಅನಾಹುತವನ್ನು ಜಾಗೃತ ನಾಗರಿಕರು ಹಾಗೂ ಪೊಲೀಸರು ತಪ್ಪಿಸಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ಬಾಲಕಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ ಇಬ್ಬರು ಒಂದೇ ಪ್ರದೇಶದಲ್ಲಿ ವಾಸವಾಗಿದ್ದಾರೆ. ಆಕೆಯನ್ನು ಅಡ್ಡಗಟ್ಟಿ ಕುತ್ತಿಗೆಗೆ ಚಾಕು ಹಿಡಿದು ಹೆದರಿಸಿದ್ದಾನೆ. ಜನರು ಸ್ಥಳದಲ್ಲಿ ಜಮಾಯಿಸಿದರೂ ಕೂಡಲೇ ಬಾಲಕಿಯನ್ನು ರಕ್ಷಿಸಿ ಆ ಯುವಕನನ್ನು ಥಳಿಸಿ ಪೊಲೀಸರಿಗೆ ಹಿಡಿದುಕೊಡಲಾಯಿತು.