ಮುಂದಿನ 5 ವರ್ಷಗಳಿಗೆ 9 ಐಸಿಸಿ ಟೂರ್ನಿಗಳು: ಭಾರತಕ್ಕೆ 3 ಟೂರ್ನಿಗಳ ಆತಿಥ್ಯ!


ನವದೆಹಲಿ, ಜುಲೈ 21:
ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮುಂದಿನ ಐದು ವರ್ಷಗಳಲ್ಲಿ ಒಟ್ಟು 9 ಅಂತಾರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸಲಿದೆ. ಐಸಿಸಿ ಈ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸುವ ರಾಷ್ಟ್ರಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿಯೇ ಭಾರತಕ್ಕೆ ಮೂರು ಪ್ರಮುಖ ಟೂರ್ನಿಗಳ ಆತಿಥ್ಯ ದೊರೆತಿದೆ.

ಆದರೆ, ಈ ಮೂರರಲ್ಲಿ ಎರಡು ಟೂರ್ನಿಗಳನ್ನು ಭಾರತ ಜಂಟಿಯಾಗಿ ಆಯೋಜಿಸಬೇಕಾಗಿದೆ. ಇಂಗ್ಲೆಂಡ್ ಕ್ರಮವಾಗಿ ಮೂರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ಗಳಿಗೆ ಆತಿಥ್ಯ ನೀಡಲಿರುವುದು ವಿಶೇಷ.

ಇಗೀಗ ಪ್ರಕಟವಾದ ಐಸಿಸಿ ಟೂರ್ನಿಗಳ ಪಟ್ಟಿ ಹೀಗಿದೆ:

  • ಟಿ20 ವಿಶ್ವಕಪ್ 2026:
    ಆತಿಥ್ಯ — ಭಾರತ ಮತ್ತು ಶ್ರೀಲಂಕಾ (ಜಂಟಿಯಾಗಿ)
  • ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 2027:
    ಆತಿಥ್ಯ — ಇಂಗ್ಲೆಂಡ್
  • ಏಕದಿನ ವಿಶ್ವಕಪ್ 2027:
    ಆತಿಥ್ಯ — ದಕ್ಷಿಣ ಆಫ್ರಿಕಾ, ಝಿಂಬಾಬ್ವೆ, ನಮೀಬಿಯಾ
  • ಟಿ20 ವಿಶ್ವಕಪ್ 2028:
    ಆತಿಥ್ಯ — ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್
  • ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 2029:
    ಆತಿಥ್ಯ — ಇಂಗ್ಲೆಂಡ್
  • ಚಾಂಪಿಯನ್ಸ್ ಟ್ರೋಫಿ 2029:
    ಆತಿಥ್ಯ — ಭಾರತ
  • ಟಿ20 ವಿಶ್ವಕಪ್ 2030:
    ಆತಿಥ್ಯ — ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲೆಂಡ್ (ಜಂಟಿಯಾಗಿ)
  • ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 2031:
    ಆತಿಥ್ಯ — ಇಂಗ್ಲೆಂಡ್
  • ಏಕದಿನ ವಿಶ್ವಕಪ್ 2031:
    ಆತಿಥ್ಯ — ಭಾರತ ಮತ್ತು ಬಾಂಗ್ಲಾದೇಶ್ (ಜಂಟಿಯಾಗಿ)

ಇದರಿಂದಾಗಿ, ಇಂಗ್ಲೆಂಡ್ ಮೂರು ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ಗಳಿಗೆ ನಿರಂತರ ಆತಿಥ್ಯ ನೀಡಲಿದ್ದು, ಈ ಮೂಲಕ ಮೂರು ಆವೃತ್ತಿಗಳನ್ನು ಹಮ್ಮಿಕೊಳ್ಳುವ ಹಕ್ಕನ್ನು (ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್) ತನ್ನದಾಗಿಸಿಕೊಂಡಿದೆ.

ಇತ್ತ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ಪ್ರಮುಖ ಟೂರ್ನಿಗಳ ಆತಿಥ್ಯವೊಂದನ್ನು ತಮ್ಮ ಹತ್ತಿರ ಉಳಿಸಿಕೊಂಡಿದೆ — ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು 2031ರ ಏಕದಿನ ವಿಶ್ವಕಪ್.

ಕ್ರಿಕೆಟ್ ಪ್ರೇಮಿಗಳಿಗೆ, ಮುಂದಿನ ಐದು ವರ್ಷಗಳು ಸಾಕಷ್ಟು ರೋಚಕ ಕ್ಷಣಗಳನ್ನು ನೀಡುವ ಸಾಧ್ಯತೆಯಿದೆ. ಜಾಗತಿಕ ಕ್ರಿಕೆಟ್ ಟೂರ್ನಿಗಳ ಆಯೋಜನೆಗೆ ಭಾರತ ಮತ್ತೆ ಕೇಂದ್ರವಾಗುತ್ತಿರುವುದು ಭಾರತೀಯ ಕ್ರಿಕೆಟ್ ಶಕ್ತಿಯ ಮತ್ತೊಂದು ಸೂಚಕ.