
ಶಿರಸಿ: ನಗರದಲ್ಲಿನ ರಾಮನಬೈಲ್ ಪ್ರದೇಶದ ನಿವಾಸಿ ಸಂತೋಷ್ ಸತ್ಯನಾರಾಯಣ ಶೇಟ್ ಅವರಿಗೆ ‘ಇಂಡಿಯಾ ಸ್ಟಾರ್ ವರ್ಲ್ಡ್ ರೆಕಾರ್ಡ್ಸ್’ ಹಾಗೂ ‘ಇಂಡಿಯಾ ಸ್ಟಾರ್ ಪ್ಯಾಷನ್ ಅವಾರ್ಡ್ 2025’ ಎಂಬ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ವಿಭಿನ್ನ ಕ್ಷೇತ್ರಗಳಲ್ಲಿ ಮಾದರಿಯಾದ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಸಂಸ್ಥೆಯು ಆನ್‌ಲೈನ್ ಮುಖಾಂತರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಪ್ರಶಸ್ತಿಗೆ ಕರ್ನಾಟಕದಿಂದ ಆಯ್ಕೆಯಾದ ಸಂತೋಷ್ ಶೇಟ್ ಅವರಿಗೆ, ವಾಯುಯಾನ ಕ್ಷೇತ್ರದಲ್ಲಿ ನೀಡಿದ ಶ್ಲಾಘನೀಯ ಕೊಡುಗೆಗಾಗಿ ಈ ಮಾನ್ಯತೆ ನೀಡಲಾಗಿದೆ.
ಸಂಸ್ಥೆಯು ಸಂತೋಷ್ ಅವರ ಸಾಧನೆಯನ್ನು ಪ್ರಶಂಸಿ, ಈ ಪ್ರಶಸ್ತಿ ಅವರ ವೃತ್ತಿಪರ ಪಯಣದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಪರಿಣಮಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದೆ.
ಸಂತೋಷ್ ಶೇಟ್ ಅವರು ಶಿರಸಿಯ ರಾಮನಬೈಲಿನ ಸತ್ಯನಾರಾಯಣ ಶೇಟ್ ಮತ್ತು ನಾಗರತ್ನ ಶೇಟ್ ದಂಪತಿಗಳ ಪುತ್ರರಾಗಿದ್ದಾರೆ.

