ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ‘ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಸಮಕಾಲೀನ ನಟ’ ಎನ್ನುವ ಗಿನ್ನಿಸ್ ರೆಕಾರ್ಡ್ ಮಾಡಿದ ತೆಲುಗು ನಟ ಬ್ರಹ್ಮಾನಂದಂ

‘ಬ್ರಹ್ಮಾನಂದಂ’ ಎನ್ನುವ ಹೆಸರನ್ನು ಕೇಳದವರೇ ಇಲ್ಲ. ತೆಲುಗು ಚಿತ್ರರಂಗದ ಪ್ರಸಿದ್ಧ ಹಾಸ್ಯ ನಟ, ಸಾವಿರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿ ‘ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಸಮಕಾಲೀನ ನಟ’ ಎನ್ನುವ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ.

ಚಿತ್ರರಂಗಕ್ಕೆ ಬರುವ ಮುನ್ನ ಉಪನ್ಯಾಸಕರಾಗಿದ್ದ ಬ್ರಹ್ಮಾನಂದಂ, ತೆಲುಗು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇವರು ಕನ್ನಡದಲ್ಲಿ ಪುನೀತ್‌ ರಾಜಕುಮಾರ್ ಅಭಿನಯದ ‘ನಿನ್ನಿಂದಲೇ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

ತಮ್ಮ ವಿಭಿನ್ನ ಡೈಲಾಗ್ ಹಾಗೂ ಮ್ಯಾನರಿಸಂನಿಂದಲೇ ಪ್ರೇಕ್ಷಕರನ್ನು ನಕ್ಕು ನಗಿಸುವ ಬ್ರಹ್ಮಾನಂದಂ ಅವರಿಗೆ ಆಂಧ್ರ, ತೆಲಂಗಾಣದಲ್ಲಿ ಮಾತ್ರವಲ್ಲದೇ ತಮಿಳುನಾಡು, ಕರ್ನಾಟಕದಲ್ಲಿ ಕೂಡಾ ಅಪಾರ ಅಭಿಮಾನಿ ಬಳಗವಿದೆ. 1986 ರಲ್ಲಿ ‘ಆಹಾ ನಾ ಪೆಳ್ಳಂಟ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಲಿಟ್ಟ ಬ್ರಹ್ಮಾನಂದಂ, ಇಲ್ಲಿಯವರೆಗೆ 1000 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪಟ್ಟಿಯಲ್ಲಿ ಸೇರಿದ್ದಾರೆ. ಫಿಲ್ಮ್ಫೇರ್, ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ, 6 ಬಾರಿ ನಂದಿ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಬ್ರಹ್ಮಾನಂದಂ ಮುಡಿಗೇರಿಸಿಕೊಂಡಿದ್ದಾರೆ.

ಚಿತ್ರರಂಗಕ್ಕೆ ಬರುವ ಮುನ್ನ ಬ್ರಹ್ಮಾನಂದಂ ಪಶ್ಚಿಮ ಗೋದಾವರಿ ಜಿಲ್ಲೆಯ ಅತ್ತಿಲಿಯ ಕಾಲೇಜೊಂದರಲ್ಲಿ ತೆಲುಗು ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು ಎಂಬುದು ಬಹಳ ಜನರಿಗೆ ತಿಳಿದಿಲ್ಲ.ಕೇವಲ ನಟನೆಗೆ ಮಾತ್ರ ಸೀಮಿತವಾಗಿಲ್ಲ. ಚಿತ್ರಕಲೆಯಲ್ಲಿ ಕೂಡ ಬಹಳ ಆಸಕ್ತಿಯನ್ನು ಹೊಂದಿರುವ ಬ್ರಹ್ಮಾನಂದಂ, ಯಾವುದೇ ಚಿತ್ರಕಲಾವಿದನಿಗೆ ಕಡಿಮೆಯಿಲ್ಲ ಎಂಬಂತೆ ಚಿತ್ರಗಳನ್ನು ಬಿಡಿಸುತ್ತಾರೆ. ಪೇಪರ್, ಪೆನ್ಸಿಲ್ ಹಿಡಿದರೆ ಸಾಕು ವಾರಗಟ್ಟಲೇ ಕುಳಿತು ಚಿತ್ರಗಳನ್ನು ಪೂರ್ತಿ ಮಾಡುತ್ತಾರಂತೆ.

ಇನ್ನು, ಒಂದೇ ಭಾಷೆಯಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದನಾಗಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಬ್ರಹ್ಮಾನಂದಂ ಹೆಸರು ದಾಖಲಾಗಿದೆ. ಆದರೆ ಇಂತಹ ಮೇರು ನಟನಿಗೆ ಆರೋಗ್ಯ ಸಮಸ್ಯೆ ಎದುರಾದ ಕಾರಣ, ಇತ್ತೀಚಿನ ದಿನಗಳಲ್ಲಿ ಸಿನಿಮಾ ಅವಕಾಶಗಳು ಕ್ಷೀಣಿಸಿದ್ದವು. ಹೀಗಾಗಿ ಕಿರುತೆರೆಯಲ್ಲಿ ನಟಿಸಲು ಯೋಚಿಸಿದರು. ಅದರಂತೆ ಧಾರಾವಾಹಿಗಳಲ್ಲಿ ನಟಿಸಿ ಅಲ್ಲೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅಲ್ಲದೇ ಒಂದಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏನೇ ಆಗಲಿ ಇಂತಹ ಕಲಾವಿದರು ನೂರ್ಕಾಲ ಆರೋಗ್ಯದಿಂದ ಬದುಕಬೇಕು ಎನ್ನುವುದೇ ಅಭಿಮಾನಗಳ ಹಾರೈಕೆ.