ಕರ್ತವ್ಯ ನಿರತ ಎಎಸ್‌ಐ ಹೃದಯಾಘಾತದಿಂದ ಸಾವು

ಕರ್ತವ್ಯ ನಿರತ ಎಎಸ್ಐ ಇಂದು ದಿಢೀರ್​​ ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ಜುಲೈ 5, 2025ರಂದು ಬೆಳಗ್ಗೆ ಆಘಾತಕಾರಿ ಘಟನೆಯೊಂದು ನಡೆದಿದೆ. ಗೋಕಾಕ್ ಮಹಾಲಕ್ಷ್ಮಿದೇವಿ ಜಾತ್ರೆಯ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಎಎಸ್​ಐ ಮೀರಾ ನಾಯಕ್​​​ ಹೃದಯಾಘಾತದಿಂದ ಕುಸಿದು ಸಾವನಪ್ಪಿದ್ದಾರೆ. ಈ ಘಟನೆ ಪೊಲೀಸ್ ಇಲಾಖೆಯಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದ್ದು, ಕರ್ತವ್ಯದಲ್ಲಿರುವಾಗಲೇ ಒಬ್ಬ ಸಮರ್ಥ ಅಧಿಕಾರಿಯನ್ನು ಕಳೆದುಕೊಂಡಿರುವುದಕ್ಕೆ ಇಲಾಖೆಯ ಸಿಬ್ಬಂದಿ ದಿಗ್ಭ್ರಮೆಗೊಂಡಿದ್ದಾರೆ.

ಜುಲೈ 5ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ, ಮೀರಾ ನಾಯಕ್ ಅವರು ತೀವ್ರ ಎದೆನೋವಿನಿಂದ ಕುಸಿದು ಬಿದ್ದರು. ತಕ್ಷಣವೇ ಇತೆ ಸಿಬ್ಬಂದಿ ಅವರನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಪರೀಕ್ಷಿಸಿದಾಗ ಅವರು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಎಎಸ್‌ಐ ಮೀರಾ ನಾಯಕ್ ಹೃದಯಾಘಾತದಿಂದ ಸಾವು!

ಹುಬ್ಬಳ್ಳಿಯ ಎಪಿಎಂಸಿ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕಿ (ಎಎಸ್‌ಐ) ಮೀರಾ ನಾಯಕ್ (48) ಅವರು ತೀವ್ರ ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಾರೆ. ಕರ್ತವ್ಯದಲ್ಲಿರುವಾಗಲೇ ಒಬ್ಬ ಸಮರ್ಥ ಅಧಿಕಾರಿಯನ್ನು ಕಳೆದುಕೊಂಡಿರುವುದಕ್ಕೆ ಇಲಾಖೆಯ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ಮೀರಾ ನಾಯಕ್ ಅವರ ಮೃತದೇಹವನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.