ಗರ್ಭನಿರೋಧಕ ಮಾತ್ರೆ ಡೇಂಜರ್! ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಳಕ್ಕೆ ಕಾರಣ? ಜಯದೇವ ತಜ್ಞರ ಶಾಕಿಂಗ್ ವರದಿ

ಬೆಂಗಳೂರು (ಜು.03): ಗೃಹಿಣಿಯರು ಮನೆಯಲ್ಲೇ ಕುಸಿದು ಬೀಳ್ತಿದ್ದಾರೆ. ಮಹಿಳೆಯರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಲ್ಲೇ ಇದೆ. ಸಣ್ಣ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಒಳಗಾಗಲು ಕಾರಣ ಏನು ಅನ್ನೋದೆ ದೊಡ್ಡ ಪ್ರಶ್ನೆ ಆಗಿದೆ. ಈ ಬಗ್ಗೆ ಬೆಂಗಳೂರಿನ ಜಯದೇವ ಆಸ್ಪತ್ರೆ ತಜ್ಞರು ಆಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಈ ವರದಿಯಲ್ಲಿ ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಲು ಗರ್ಭನಿರೋಧಕ ಮಾತ್ರೆ ಕೂಡ ಒಂದು ಕಾರಣ ಎನ್ನುವ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ. 

ಮಹಿಳೆಯರೇ ಎಚ್ಚರ.. ಎಚ್ಚರ..!

ಮೆಡಿಕಲ್ ಶಾಪ್​ಗಳಲ್ಲಿ ಸುಲಭವಾಗಿ ಗರ್ಭನಿರೋಧಕ ಮಾತ್ರೆಗಳು ಸಿಗುತ್ತೆ ಅಂತ ಹೆಚ್ಚಾಗಿ ತೆಗೆದುಕೊಂಡ್ರೆ ಜೀವಕ್ಕೆ ಬರುತ್ತೆ ಕುತ್ತು. ಮಹಿಳೆಯರು ಗರ್ಭನಿರೋಧಕ ಮಾತ್ರೆಗಳನ್ನು ಬಳಸೋದು ಬಲು ಡೇಂಜರ್​ ಎನ್ನಲಾಗ್ತಿದೆ. ಈ ಮಾತ್ರೆಗಳ ಅತಿಯಾದ ಸೇವನೆಯೇ ಮಹಿಳೆಯರಲ್ಲಿ ಹೃದಯಾಘಾತಕ್ಕೂ ಕಾರಣವಾಗಿದೆ ಎನ್ನುವ ಆಘಾತಕಾರಿ ಅಂಶ ವರದಿಯಲ್ಲಿ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.

ವರದಿಯಲ್ಲಿ ಆಘಾತಕಾರಿ ಅಂಶಗಳು 

ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಿದ ಹಿನ್ನೆಲೆ ಜಯದೇವ ಆಸ್ಪತ್ರೆ ತಜ್ಞರು ಆಳವಾದ ಅಧ್ಯಯನ ನಡೆಸಿ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಈ ವರದಿಯಲ್ಲಿ ಕೆಲ ಆಘಾತಕಾರಿ ಅಂಶಗಳು ಕೂಡ ಕೂಡಿದೆ ಎನ್ನಲಾಗ್ತಿದೆ. ಈ ವರದಿಯನ್ನ ತಜ್ಞರು ಸರ್ಕಾರಕ್ಕೆ ನೀಡಲಿದ್ದಾರೆ.

ಮಹಿಳೆಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ

ಬೆಂಗಳೂರಿನಲ್ಲಿ ಹಾರ್ಟ್ ಅಟ್ಯಾಕ್​ ಯುವ ಮಹಿಳೆಯರೇ ಹೆಚ್ಚು ಬಲಿಯಾಗಿದ್ದು, ಗರ್ಭನಿರೋಧಕ ಮಾತ್ರೆ ಮಹಿಳೆಯರ ಹೃದಯಸ್ಥಂಭನಕ್ಕೆ ಕಾರಣ ಎಂದು ವರದಿ ಹೇಳ್ತಿದೆ. ಗರ್ಭನಿರೋಧಕ ಮಾತ್ರೆಗಳ ಬಳಕೆಯಿಂದ ಮಹಿಳೆಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಂಡು ಬರುತ್ತಿದ್ದು, ಮಾತ್ರೆಗಳ ಬಳಕೆ ಹೃದಯಘಾತಕ್ಕೆ ಕಾರಣ ಎನ್ನಲಾಗ್ತಿದೆ.

ಪೇನ್ ಕಿಲ್ಲರ್​ ಕೂಡ ಡೇಂಜರ್

ಹೃದಯಾಘಾತ ಕಾರಣದ ಬಗ್ಗೆ ತಜ್ಞರು ಸರ್ಕಾರಕ್ಕೆ ವರದಿ ನೀಡಲು ಮುಂದಾಗಿದ್ದಾರೆ. ಮಹಿಳೆಯರಿಗೆ ಗರ್ಭ ನಿರೋಧಕ ಮಾತ್ರೆ, ನೋವು ನಿವಾರಕ ಮಾತ್ರೆ ಕಡಿಮೆ ಬಳಸುವಂತೆ ಸಲಹೆ ನೀಡಲಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮಕ್ಕೆ ಜಯದೇವ ತಜ್ಞರ ಸಮಿತಿ ಒತ್ತಾಯಿಸಲಿದೆ.