ನಡೆದುಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿಗೆ ನಿಮಿಷಗಳಲ್ಲಿ ಬ್ರೇನ್​ ಡೆಡ್, ​ಕಾರ್ಡಿಯಾಕ್ ಅರೆಸ್ಟ್

ಬೆಂಗಳೂರು ಗ್ರಾಮಾಂತರ (ಜು.02): ರಾಜ್ಯದಲ್ಲಿ ಏನಾಗ್ತಿದೆ? ಜನರ ಆರೋಗ್ಯದಲ್ಲಿ ಏರುಪೇರು, ದಿಢೀರ್​ ಸಾವು ಜನರನ್ನು ಬೆಚ್ಚಿಬೀಳಿಸಿದೆ. ಇದರ ನಡುವೆ ಬೆಂಗಳೂರು ಗ್ರಾಮಾಂತರ ಪ್ರದೇಶ ಹೊಸಕೋಟೆಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ನಡೆದುಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿಗೆ ನಿಮಿಷದಲ್ಲೇ ಬ್ರೇನ್ ಡೆಡ್ ಆಗಿದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದವನಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಆಸ್ಪತ್ರೆ ಬಂದ ನಿಮಿಷದಲ್ಲಿ ಬ್ರೇನ್ ಡೆಡ್​!

ಹೊಸಕೋಟೆ ನಗರದ ಖಾಸಗಿ ಆಸ್ಪತ್ರೆಗೆ ನಡೆದುಕೊಂಡು ಬಂದ ವ್ಯಕ್ತಿಯ ಮೆದುಳು ಕೆಲವೇ ನಿಮಿಷಗಳಲ್ಲಿ ನಿಷ್ಕ್ರಿಯಗೊಂಡಿದೆ. ಯಾಕೋ ಸ್ವಲ್ಪ ಎದೆ ನೋಯ್ತಿದೆ ಎಂದು ಆಸ್ಪತ್ರೆಗೆ ಕೋನಪ್ಪ ಎಂಬ ವ್ಯಕ್ತಿ ನಡೆದುಕೊಂಡೇ ಬಂದಿದ್ದಾರೆ. ಈ ವೇಳೆ ವೈದ್ಯರು ತಪಾಸಣೆ ನಡೆಸಿದ್ದಾರೆ. ಬಳಿಕ ಬೆಡ್​ ಮೇಲೆ ಮಲಗಿದ್ದವನ ಬ್ರೇನ್ ಡೆಡ್ ಆಗಿದೆ.

ಕಾರ್ಡಿಯಾಕ್ ಅರೆಸ್ಟ್

ಬೆಡ್ ಮೇಲೆಯೇ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು, ಹೀಗಾಗಿ ಬ್ರೇನ್​ ಡೆಡ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೊಸಕೋಟೆಯ 52 ವಯಸ್ಸಿನ ಕೋನಪ್ಪ ಎಂಬ ವ್ಯಕ್ತಿ‌ಗೆ ಆಸ್ಪತ್ರೆ ಒಳಗೆ ಎದೆ ನೋವು ಹೆಚ್ಚಿದೆ. ವೈದ್ಯರು ಚಿಕಿತ್ಸೆ ನೀಡಲು ಮುಂದಾಗುತ್ತಿದ್ದಂತೆಯೇ ಕಾರ್ಡಿಯಾಕ್ ಅರೆಸ್ಟ್ ನಿಂದ ಕುಸಿದುಬಿದ್ದಾನೆ ಎನ್ನಲಾಗ್ತಿದೆ..