ಕರಾವಳಿ ಜಿಲ್ಲೆಗಳಲ್ಲಿ  ಎರಡು ದಿನ ಭಾರೀ ಮಳೆ: ಉತ್ತರ ಕನ್ನಡದಲ್ಲಿ ಆರೇಂಜ್‌ ಅಲರ್ಟ್‌ ಜಾರಿಗೆ

ರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದ್ದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಆರೇಂಜ್‌ ಅಲರ್ಟ್‌ ಜಾರಿಯಾಗಿದೆ.

ಸಮುದ್ರದಲ್ಲಿ ಗಾಳಿಯ ಒತ್ತಡ ಹೆಚ್ಚಿರುವ ಬಗ್ಗೆ ನಾಡದೋಣಿ ಮೀನುಗಾರರಿಗೆ ಎಚ್ಚರಿಕೆ ಸಂದೇಶ ಕಳುಹಿಸಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಜಲಾಶಯಗಳ ಒಳ ಹರಿವು ಹೆಚ್ಚಾಗಲಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 28-21
ಮಂಗಳೂರು: 28-25
ಶಿವಮೊಗ್ಗ: 27-22
ಬೆಳಗಾವಿ: 25-22
ಮೈಸೂರು: 28-22

ಮಂಡ್ಯ: 29-21
ಮಡಿಕೇರಿ: 23-19
ರಾಮನಗರ: 29-21
ಹಾಸನ: 24-20
ಚಾಮರಾಜನಗರ: 28-21
ಚಿಕ್ಕಬಳ್ಳಾಪುರ: 28-21

ಕೋಲಾರ: 29-21
ತುಮಕೂರು: 28-21
ಉಡುಪಿ: 28-25
ಕಾರವಾರ: 28-26
ಚಿಕ್ಕಮಗಳೂರು: 23-19
ದಾವಣಗೆರೆ: 28-23

ಹುಬ್ಬಳ್ಳಿ: 27-22
ಚಿತ್ರದುರ್ಗ: 28-23
ಹಾವೇರಿ: 28-23
ಬಳ್ಳಾರಿ: 33-25
ಗದಗ: 28-23
ಕೊಪ್ಪಳ: 24-21

ರಾಯಚೂರು: 32-26
ಯಾದಗಿರಿ: 31-25
ವಿಜಯಪುರ: 29-24
ಬೀದರ್: 31-24
ಕಲಬುರಗಿ: 31-24
ಬಾಗಲಕೋಟೆ: 30-24