
ಚಾಮರಾಜನಗರ: ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ವಾಟ್ಸಾಪ್ ಸ್ಟೇಟಸ್‌ನಲ್ಲಿ ವೀಡಿಯೋ ಹರಿಬಿಟ್ಟು ಬಳಿಕ ಮನನೊಂದು ಯುವಕನು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದಲ್ಲಿ ನಡೆದಿದೆ.
24 ವರ್ಷದ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಸಂತೋಷ್ ಹಾಗೂ ಸಾಗಡೆ ಗ್ರಾಮದ ಯುವತಿಯು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯು ಬೇರೊಬ್ಬನ ಜತೆ ಮೆಸೇಜ್ ಮಾಡುತ್ತಿದ್ದನು. ಇದನ್ನು ಸಂತೋಷ್ ಪ್ರಶ್ನಿಸಿದ್ದಕ್ಕೆ ಆತನಿಂದ ದೂರವಾಗಿದ್ದಾಳೆ.
ಇನ್ನು ಸಂತೋಷ್ ಸಾಯುವ ಮುನ್ನ “ನನ್ನ ಸಾವಿಗೆ ಆಕೆಯೇ ಕಾರಣ. ಅವಳನ್ನು ಬಿಟ್ಟು ಇನ್ಯಾರು ಕಾರಣರಲ್ಲ” ಎಂದು ಆತ್ಮಹತ್ಯೆಗೂ ಮುನ್ನ ವೀಡಿಯೋ ಮಾಡಿ ವಾಟ್ಸಪ್ ಸ್ಟೇಟಸ್‌ಗೆ ಅವರಿಬ್ಬರು ಜೊತೆಯಲ್ಲಿ ಇರುವ ಫೋಟೋ ಹಾಕಿದ್ದ. ಬಳಿಕ ಸಂತೋಷ್, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸಂಬಂಧ ತೆರಕಣಾಂಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
