ಪ್ರವಾಸಿಗರೇ ಗಮನಿಸಿ: ಎತ್ತಿನಭುಜ ಚಾರಣಕ್ಕೆ ತಾತ್ಕಾಲಿಕ ನಿಷೇಧ

ಚಿಕ್ಕಮಗಳೂರು ಮಳೆಗಾಲದಲ್ಲಿ ಪ್ರವಾಸಿಗರ ಹಾಟ್ ಸ್ಪಾಟ್. ಇಲ್ಲಿಗೆ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಬರುವ ಮಂದಿ ಇದೊಂದು ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗದೇ ವಾಪಾಸ್ ಹೋಗಲ್ಲ. ಆದ್ರೆ ಈ ಬೆಟಕ್ಕೆ ಈಗ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ. ಹೌದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಟ್ರಕ್ಕಿಂಗ್ ಪ್ಲೇಸ್ ಎತ್ತಿನ ಭುಜಕ್ಕೆ ತಾತ್ಕಾಲಿಕ ಬ್ರೇಕ್ ಬಿದಿದ್ದೆ. ನಿರಂತರ ಮಳೆ, ಭಾರೀ ಮಂಜುಕವಿಯುತ್ತಿರುವ ಕಾರಣದಿಂದ ಎತ್ತಿನ ಭುಜ ಪ್ರವಾಸಿ ತಾಣಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಜುಲೈ ಅಂತ್ಯದವರೆಗೆ ಇರಲ್ಲ ಟ್ರಕ್ಕಿಂಗ್

ಈ ಕುರಿತು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಚಾರಣಕ್ಕೆ ಬ್ರೇಕ್ ಹಾಕಲಾಗಿದೆ ಎಂದು ತಿಳಿಸಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿರುವ ಸುಪ್ರಸಿದ್ದ ಎತ್ತಿನಭುಜಕ್ಕೆ 7 ಕಿ.ಮೀ. ಚಾರಣ ಹೋಗಿ ಸೌಂದರ್ಯವನ್ನು ಸವಿಯಬೇಕು. ರಾಜ್ಯದ ನಾನಾ ಕಡೆಯಿಂದ ಎತ್ತಿನ ಭುಜಕ್ಕೆ ಪ್ರವಾಸಿಗರು ಬರುತ್ತಾರೆ.