‘ಕೈ’ ಶಾಸಕರಲ್ಲಿ ಮಡುಗಟ್ಟಿದ ಅಸಮಾಧಾನ; ಆರ್.ವಿ ದೇಶಪಾಂಡೆ ಏನಂದ್ರು? 

ಕಾರವಾರ :ಕೆಲವು ಶಾಸಕರಿಗೆ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇದೆ,ಕೆಲವು ಶಾಸಕರಿಗೆ ಮಂತ್ರಿ ಆಗಬೇಕು, ಅಧ್ಯಕ್ಷ ಆಗಬೇಕು ಅಂತಾ ಆಸೆ ಇರುತ್ತದೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಇಂದು ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿದ್ದರಾಮಯ್ಯನವರ  ಸರ್ಕಾರಕ್ಕೆ ಹೈಕಮಾಂಡ್ ಸಂಪೂರ್ಣ ಬೆಂಬಲ ಇದೆ.ಕೆಲವು ಶಾಸಕರಿಗೆ ಸಮಸ್ಯೆ ಇರಬಹುದು ರಾಜ್ಯ ಉಸ್ತುವಾರಿ ಸುರ್ಜೆವಾಲಾರವರು  ಕರೆದು ಸಮಸ್ಯೆ ಕೇಳುತ್ತಾರೆ ಎಂದರು.

ಶಾಸಕರ ಸಮಸ್ಯೆ ಇದೆ ಅಂದ್ರೆ ಸುರ್ಜೆವಾಲಾ ರವರು ಕರೆದು ಮಾತಾಡ್ತಾರೆ ,ಎಲ್ಲವೂ ಸರಿ ಹೊಗುತ್ತದೆ.ಹಳೆ ಸಿದ್ಧರಾಮಯ್ಯ ಈಗ ಹೇಗೆ ಇರೊಕೆ ಸಾಧ್ಯ..?,ಮೊದಲು ಸಿದ್ದರಾಮಯ್ಯ ಯಂಗ್ ಇದ್ದ,  ಸ್ವಲ್ಪ ಶಕ್ತಿ ಜಾಸ್ತಿ  ಇತ್ತು,ಈಗ ನಾನೆ ನೋಡಿ ಮೊದಲು ಇದ್ದ ದೇಶಪಾಂಡೆ ಈಗ ಇದಿನಾ.? ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರ ಸಾಮರ್ಥ್ಯದ ಕುರಿತು ಟಾಂಗ್ ನೀಡಿದ ಅವರು ಆಡಳಿತದಲ್ಲಿ ಎಲ್ಲ ನಿರ್ದಾರ ಶಾಸಕರಿಗೆ  ಹೇಳಿ ಮಾಡೊಕೆ ಆಗುವುದಿಲ್ಲ, ಸಿದ್ಧರಾಮಯ್ಯಗೆ ತಾಳ್ಮೆ ಬಹಳ ಇದೆ ಎಂದರು.

ಇನ್ನು ದಸರಾ ಉದ್ಘಾಟನೆ ಬೇರೆ ಮುಖ್ಯಮಂತ್ರಿ ಮಾಡ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿಕೆ ಗೆ ತಿರುಗೇಟು ನೀಡಿದ ಅವರು ಪಾಪಾ ಅಶೋಕ ಬಡಪಾಯಿ ತಮ್ಮ ಖುರ್ಚಿ ಉಳಿಸಿಕೊಳ್ಳೊಕೆ ಹೇಳಲೆ ಬೇಕಾಗಿದೆ.

ಅವರು ಹಾಗೆ ಹೇಳದೆ ಇದ್ರೆ ವಿರೋಧ ಪಕ್ಷದ ಸ್ಥಾನದಿಂದ ತೆಗೆದು ಬಿಡ್ತಾರೆ ,ಅಶೋಕ್ ನಿದ್ದೆಯಲ್ಲಿದ್ದಾನೆ ಅನಿಸುತ್ತೆ, ಅದಕ್ಕೆ ಹಾಗೆ ಹೇಳ್ತಾ ಇದ್ದಾನೆ.

ಐದು ವರ್ಷ ಸಿದ್ದರಾಮಯ್ಯ ನವರೇ  ಸಿಎಂ ಆಗಿ ಇರ್ತಾರೆ,ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ, ಶಾಸಕಾಂಗ ಸಭೆಯಲ್ಲಿ ವಿಷಯ ಬಂದಿಲ್ಲ,ಎಲ್ಲರೂ ಕೂಡಿ ಇದ್ದೇವೆ ಒಕ್ಕಟ್ಟಿನಿಂದ ಇದ್ದೇವೆ , ಒಳ್ಳೆಯ ಕೆಲಸ ಮಾಡ್ತಾ ಇದ್ದಾರೆ ಎಂದರು.

ಐದು ಗ್ಯಾರಂಟಿ ಯೋಜನೆಗೆ 58 ಸಾವಿರ ಕೋಟಿ ರೂಪಾಯಿ ಖರ್ಚು ಆಗ್ತಾ ಇದೆ,ಅಭಿವೃದ್ದಿ ಗೂ ಹಣ ಬಿಡುಗಡೆ ಆಗ್ತಾ ಇದೆ, ಪ್ರತಿ ಶಾಸಕರ ಕ್ಷೇತ್ರಕ್ಕೆ 50 ಕೋಟಿ ರೂಪಾಯಿ ಕೊಟ್ಟಿದ್ದಾರೆ,ಕೊಟ್ಟಿರುವ ಹಣ ಕೆಲಸ ಪ್ರಾರಂಭದ ಬಳಿಕ ಬೇಗ ಬರುತ್ತಿಲ್ಲ, ಹಣ ಬಿಡುಗಡೆ ಆಗಲು ತಡ ಆಗ್ತಾ ಇರೊದೆ ಸಮಸ್ಯೆ ಆಗಿದೆ.ಈ ಸಮಸ್ಯೆ ಈ ಹಿಂದೆನೂ ಇತ್ತು, ಈಗ ಸ್ವಲ್ಪ ಜಾಸ್ತಿ ಆಗಿದೆ ಅಷ್ಟೆ ಎಂದರು. ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ ,ಆದ್ರೆ ಸತೀಶ್ ಜಾರಕಿಹೊಳಿ ಒಬ್ಬ ಒಳ್ಳೆ ಮನುಷ್ಯ,  ಒಳ್ಳೆ ವ್ಯಕ್ತಿ.ಅಧ್ಯಕ್ಷ ಅವರು ಆಗ್ತಾರೋ ಇಲ್ವೋ ನನಗೆ ಗೊತ್ತಿಲ್ಲ ಎಂದರು.