ಸಮರ್ಥ್ ಜೆ ರಾವ್ ಗೆ ಬೆಳ್ಳಿ ಪದಕ:


ಆಂಧ್ರ ಪ್ರದೇಶದ ವಿಝಿಯನಗರಂನಲ್ಲಿ ಜೂ.24ರಿಂದ ಜೂ28ರವರೆಗೆ ನಡೆದ ವಿಶೇಷ ಚೇತನರ ರಾಷ್ಟ್ರಮಟ್ಟದ ಚದುರಂಗದಲ್ಲಿ ನಮ್ಮ ಹೊನ್ನಾವರ ಅಂಚೆ ಕಚೇರಿಯಲ್ಲಿ ಸ್ಪೋರ್ಟ್ಸ್ ಕೋಟಾದಲ್ಲಿ ನೇಮಕಾತಿ ಹೊಂದಿರುವ ಸಮರ್ಥ್ ಜಗದೀಶ್ ರಾವ್ ಅವರು ಬೆಳ್ಳಿ ಪದಕದೊಂದಿಗೆ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.


13ಕ್ಕೂ ಹೆಚ್ಚು ರಾಜ್ಯಗಳಿಂದ 101 ದಿವ್ಯಾಂಗ ಆಟಗಾರರು ಭಾಗವಹಿಸಿದ್ದರು. ಸೋಲಿಲ್ಲದ ಸರದಾರ ರಾದ ಸಮರ್ಥ್ 9ಸುತ್ತುಗಳ ಸ್ಪರ್ಧೆಯಲ್ಲಿ 7 ಅಂಕ( 5 ಜಯ ಹಾಗೂ 4 ಡ್ರಾ) ಗಳಿಸಿದ್ದಾರೆ.


ಈ ಹಿಂದೆ 2022 ಹಾಗೂ 2024 ರ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದವರು ಈ ಬಾರಿ ಹ್ಯಾಟ್ರಿಕ್ ಚಿನ್ನದ ಪದಕದಿಂದ ವಂಚಿತರಾದರು. ಆದರೆ 21 ಜುಲೈ 2025 ರಿಂದ 31ರ ವರೆಗೆ ಗೋವಾದಲ್ಲಿ ನಡೆಯುವ 24ನೇ IPCA ವಿಶ್ವಮಟ್ಟದ ವಿಶೇಷ ಚೇತನರ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಕಾರವಾರ ಡಿವಿಷ್‌ನ್‌ನ ಸುಪರಿಂಟೆಂಡೆಂಟ್ ಆಫ್ ಪೋಸ್ಟ್ ಆಫೀಸರ್ ಆಗಿರುವ ಧನಂಜಯ ಆಚಾರ್ಯ ಅವರು ಹಾಗೂ ಹೊನ್ನಾವರ ಪೋಸ್ಟ್ ಮಾಸ್ಟರ್ ಎಂ. ಎಸ್. ಗೊಂಡ ಹಾಗೂ ಎಲ್ಲಾ ಸಿಬ್ಬಂದಿಗಳು ಸಮರ್ಥ್ ರಾವ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ..