“ತುರಿಮಣೆಯಿಂದ ಹೊಡೆದು ಪತಿಯಿಂದ ಪತ್ನಿಹತ್ಯೆ” 

ರಾಮನಗರದ ಮತ್ತಿಕೆರೆ ಗ್ರಾಮದಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಉಂಟಾದ ಜಗಳದಲ್ಲಿ ಪತ್ನಿಯನ್ನು ತುರಿಮಣೆಯಿಂದ ಹೊಡೆದು ಪತಿ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಮಾಗಡಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹತ್ಯೆ ನಂತರ ತಿರುಪತಿಗೆ ಎಸ್ಕೇಪ್ ಆಗಲು ಮುಂದಾಗಿದ್ದ ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ.

ರಾಮನಗರ, ಜೂನ್​ 26: ಅಡುಗೆ  ಮಾಡುವ ವಿಚಾರಕ್ಕೆ ಗಲಾಟೆ ಉಂಟಾಗಿದ್ದು, ಈ ವೇಳೆ ತುರಿಮಣೆಯಿಂದ ಹೊಡೆದು ಪತಿಯಿಂದ ಪತ್ನಿ  ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಮತ್ತಿಕೆರೆಯಲ್ಲಿ ನಡೆದಿದೆ. ತಿಮ್ಮಮ್ಮ(65) ಹತ್ಯೆಗೈದ ರಂಗಯ್ಯ. ಹತ್ಯೆ ನಂತರ ತಿರುಪತಿಗೆ ಎಸ್ಕೇಪ್ ಆಗಲು ಮುಂದಾಗಿದ್ದ ಆರೋಪಿಯನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.