“ಹುಚ್ಚು ಕಚ್ಚಿದ ಪರಿಣಾಮ ದೇವಾಲಯದ ಬಸವ ಸಾವು”

ಮೈಸೂರು: ಹುಚ್ಚುನಾಯಿ ಕಡಿದು ತೀವ್ರ ಅನಾರೋಗ್ಯಕ್ಕೆ ಸಿಲುಕಿದ್ದ ಮೇಟಗಳ್ಳಿ ಮಹಾಲಿಂಗೇಶ್ವರ ದೇವಾಲಯದ ಬಸವ ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿತು.

ಕೆಲವು ದಿನಗಳ ಹಿಂದೆ ಹುಚ್ಚುನಾಯಿ ಬಸವನಿಗೆ ಕಚ್ಚಿದ ಪರಿಣಾಮ ನಾಯಿಯಂತೆ ಶಬ್ಧ ಮಾಡುತ್ತಾ ಸ್ಥಳೀಯರಿಗೆ ಭೀತಿ ಉಂಟುಮಾಡಿತ್ತು. ಬಸವನನ್ನು ದೇವರ ರೂಪ ಎಂದು ಭಾವಿಸಿದ್ದ ಸ್ಥಳೀಯರು ಕಟ್ಟಿಹಾಕಿ ಚಿಕಿತ್ಸೆ ಕೊಡಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಸವ ಮೃತಪಟ್ಟಿದೆ. ಮಹಾಲಿಂಗೇಶ್ವರ ದೇವಾಲಯದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಬುಧವಾರ ಸಂಜೆ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೂರು ದಿನಗಳ ಹಿಂದೆ ಹೆಚ್ಚಿನ ಚಿಕಿತ್ಸೆ: ಬಸವನಿಗೆ ರೇಬಿಸ್ ಹೆಚ್ಚಾದ ಕಾರಣ ಮೂರು ದಿನಗಳ ಹಿಂದೆ ಪಶುವೈದ್ಯರು ಬಸವನಿಗೆ ಹೆಚ್ಚಿನ ಚಿಕಿತ್ಸೆ ಪ್ರಾರಂಭಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಸವ ಮೃತಪಟ್ಟಿರುವುದು ಭಕ್ತರಿಗೆ ಬೇಸರ ಮೂಡಿಸಿದೆ.