
ಉತ್ತರ ಕನ್ನಡ ಜೂ.18 : ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಮಾನ್ಯ ಮಂಜುನಾಥ ನಾಯ್ಕ ಎನ್ನುವ ವಿದ್ಯಾರ್ಥಿನಿ ಮನೆಯಿಂದಲೇ ಓದಿ ನೀಟ್ ಪರೀಕ್ಷೆಯ ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ ಶೇ.99.34 ಅಂಕ ಪಡೆಯುವುದರ ಮೂಲಕ ದೇಶಕ್ಕೆ 14000ನೇ ರ‌್ಯಾಂಕ್ ಬಂದಿದ್ದಾಳೆ.
ಅಂಕೋಲಾದ ಜೆಸಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಮಾನ್ಯ ದ್ವೀತಿಯ ಪಿಯುಸಿಯಲ್ಲಿ ರಾಜ್ಯಕ್ಕೆ ಒಂಬತ್ತನೇ ರ‌್ಯಾಂಕ್ ಗಳಿಸಿದ್ದರು. ನೀಟ್ ಬರೆಯುವ ಸಲುವಾಗಿಯೇ ಒಂದು ವರ್ಷ ಯಾವ ಕಾಲೇಜಿಗೂ ಹೋಗದೆ ಸಿದ್ಧತೆ ಮಾಡಿದ್ದರು. ಈ ವರ್ಷ ಮನೆಯಿಂದಲೇ ನೊಯ್ಡಾ ಮೂಲದ ತರಬೇತಿ ಸಂಸ್ಥೆಯಿಂದ ಆನ್‌ಲೈನ್ ತರಬೇತಿ ಪಡೆದು ಪರೀಕ್ಷೆ ಬರೆದಿದ್ದಾರೆ .
ಮೊದಲ ಯತ್ನದಲ್ಲಿಯೇ ಉತ್ತಮ ಅಂಕ ಗಳಿಸಿದ್ದಾರೆ. ಮಾನ್ಯ ಅವರ ತಂದೆ ಮಂಜುನಾಥ ನಾಯ್ಕ ಸ್ವಂತ ಉದ್ಯೋಗ ಮಾಡಿಕೊಂಡಿದ್ದಾರೆ.

