ಖಾಸಗಿ, ಸರ್ಕಾರಿ ವಲಯದ ನೌಕರರಿಗೆ ಬಿಗ್ ಶಾಕ್! ಇನ್ಮುಂದೆ ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡ್ಬೇಕು ಗೊತ್ತಾ?

ಬೆಂಗಳೂರು: ಸದ್ಯ ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಿ ನೌಕರರಿಗೆ ಪ್ರತಿನಿತ್ಯ 8 ರಿಂದ 9 ಗಂಟೆಗಳ ಕೆಲಸದ ಅವಧಿಯನ್ನು ಫಿಕ್ಸ್ ಮಾಡಲಾಗಿದೆ. ಆದ್ರೆ, ಈ ಕೆಲಸದ ಅವಧಿಯನ್ನು ವಿಸ್ತರಣೆ ಮಾಡಲು ಚಿಂತನೆ ನಡೆದಿದ್ದು, 8 ರಿಂದ 10 ಗಂಟೆಗೆ ಹೆಚ್ಚಿಸಲು ಚರ್ಚೆ ನಡೆದಿದ್ದು, ಒಂದುವೇಳೆ ಈ ಆದೇಶ ಜಾರಿಗೆ ಬಂದ್ರೆ, ಸರ್ಕಾರಿ ಹಾಗೂ ಖಾಸಗಿ ವಲಯ ಎರಡೂ ಕ್ಷೇತ್ರದ ನೌಕರರಿಗೂ ಕೂಡ ಬಿಗ್ ಶಾಕ್ ಎದುರಾಗಲಿದೆ.

ಹೌದು, ದಿನದ ಕೆಲಸದ ಅವಧಿ ಏರಿಕೆಗೆ ಸಂಬಂಧಿಸಿದಂತೆ, ವಿಕಾಸಸೌಧದಲ್ಲಿ ಸ್ಟೇಕ್ ಹೋಲ್ಡರ್ ಜೊತೆ ಮಹತ್ವದ ಸಭೆ ನಡೆದಿದ್ದು, ಈ ಸಭೆಯಲ್ಲಿ ದಿನದ ಕೆಲಸದ ಅವಧಿಯನ್ನು 10 ಗಂಟೆಗೆ ವಿಸ್ತರಣೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಸದ್ಯ, ಪ್ರತಿನಿತ್ಯ 8ರಿಂದ 9 ಗಂಟೆ ಕೆಲ್ಸದ ಅವಧಿ ಇದ್ದು, ಇದನ್ನು 10 ಗಂಟೆಗೆ ವಿಸ್ತರಣೆಗೆ ಚರ್ಚೆ ನಡೆದಿದೆ.‌

ಶನಿವಾರ-ಭಾನುವಾರ ವಾರಾಂತ್ಯದ ರಜೆ

ಈಗಾಗಲೇ ಕೇಂದ್ರ ಹಾಗೂ ಖಾಸಗಿ ಉದ್ಯೋಗಿಗಳ ಅಸೋಸಿಯೇಷನ್ ನಿಂದಲೂ ಪ್ರಸ್ತಾವನೆ ಸಲ್ಲಿಕೆಯಾಗಿದೆ. ನಿತ್ಯ 10 ಗಂಟೆ ಕೆಲಸದ ಜೊತೆಗೆ ಸದ್ಯ ಒಂದು ದಿನ ಇರುವ ವಾರಾಂತ್ಯದ ರಜೆಯನ್ನು ಎರಡು ದಿನ ನೀಡುವ ಚರ್ಚೆಗಳು ನಡೆಯುತ್ತಿವೆ. ಅಂದ್ರೆ, ಸದ್ಯ ಭಾನುವಾರ ಮಾತ್ರ ರಜೆ ನೀಡಲಾಗುತ್ತಿದೆ. ಆದ್ರೆ, ಮುಂದಿನ ದಿನಗಳಲ್ಲಿ ಶನಿವಾರ ಭಾನುವಾರ ಎರಡು ದಿನದ ರಜೆ ನೀಡುವ ಕುರಿತು ಕೂಡ ಚರ್ಚೆಯಾಗುತ್ತಿದೆ. ನಿತ್ಯ ಒಂದು ಗಂಟೆ ಹೆಚ್ಚು ಕೆಲ್ಸ ಮಾಡಿದ್ರೇ ಎರಡು ದಿನ ವಾರಾಂತ್ಯ ದಲ್ಲಿ ರಜೆ ಸಿಕ್ಕಂತೆ ಆಗುತ್ತೆ ಎಂಬುದು ಲೆಕ್ಕಾಚಾರವಾಗಿದೆ. ಹೀಗಾಗಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಜೊತೆ ಸಭೆ ನಡೆದಿದೆ.