
ಶಿರಸಿ : ಇಲ್ಲಿನ ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
ಕಳೆದ ಎರಡು ದಿನದಿಂದ ಶಿರಸಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766 (ಇ) ನಲ್ಲಿ ಗುಡ್ಡ ಕುಸಿತವಾಗುತಿತ್ತು. ಕುಸಿದ ಗುಡ್ಡದ ಮಣ್ಣು ತೆಗೆದು ಶನಿವಾರ ರಾತ್ರಿ ಲಘು ವಾಹನ ಸಂಚಾರಕ್ಕೆ ಬಿಡಲಾಗಿತ್ತು.
ಇಂದು ಮತ್ತೆ ಕುಸಿದ ಜಾಗದಲ್ಲೇ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ಹೆದ್ದಾರಿ ಮೇಲೆ ಕಲ್ಲು, ಮರಗಳು ಬಿದ್ದಿವೆ. ಈ ಹಿನ್ನೆಲೆ ಇಂದು ಬೆಳಗ್ಗಿನಿಂದ ಕುಮಟಾ-ಶಿರಸಿಯ ಹೆದ್ದಾರಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

