
ಉತ್ತರಖಂಡದ ಕೇದಾರನಾಥದಲ್ಲಿ ಹೆಲಿಕ್ಯಾಪ್ಟರ್ ಪತನಗೊಂಡಿದೆ. ಹೆಲಿಕ್ಯಾಪ್ಟರ್‌ನಲ್ಲಿ 7 ಜನ ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ. ಹವಾಮಾನ ವೈಪರೀತ್ಯದಿಂದಾಗಿ ಈ ಅಪಘಾತ ಸಂಭವಿಸಿದೆ.
ಆರ್ಯನ್ ಕಂಪನಿಗೆ ಸೇರಿದ ಈ ಹೆಲಿಕ್ಯಾಪ್ಟರ್ ಗೌರಿಕುಂಡ್ ಮತ್ತು ತ್ರಿಜುಗಿನಾರಾಯಣ ನಡುವೆ ಪತನಗೊಂಡಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


