ಶಿರಸಿಯಲ್ಲಿ ಪೊಲೀಸ್ ಠಾಣೆಯ ವತಿಯಿಂದ ರಕ್ತದಾನ ಶಿಬಿರ

ಶಿರಸಿ ಜೂ.14 : ಜೂನ್ 14 ವಿಶ್ವ ರಕ್ತ ದಾನಿಗಳ ದಿನದ ಅಂಗವಾಗಿ ಶಿರಸಿಯ ಪಂಡೀತ್ ಸರಕಾರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಶಿರಸಿ ನಗರ ಪೊಲೀಸ್ ಠಾಣೆಯ ವತಿಯಿಂದ ರಕ್ತದಾನ ಶಿಬಿರ ನಡೆಸಿ ಸ್ವಯಂ ರಕ್ತದಾನ ಮಾಡಿದ ಘಟನೆ ನಡೆದಿದೆ.


ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ಸೇರಿದಂತೆ ಒಟ್ಟು 10 ಜನ ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಶಿರಸಿ ಉಪವಿಭಾಗದ ಡಿಎಸ್ಪಿ ಗೀತಾ ಪಾಟೀಲ್, ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ಮ ಹಾಗೂ‌ ಪಂಡೀತ ಆಸ್ಪತ್ರೆಯ ಆಡಳಿತಾಧಿಕಾರಿ ನೇತ್ರಾವತಿ ಶಿರ್ಸಿಕರ್ ಅವರು ಬ್ಲಡ್ ಬ್ಯಾಂಕ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.