
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು NEET-UG 2025ರ ಫಲಿತಾಂಶ ಪ್ರಕಟ ಮಾಡಿದೆ. ದೇಶಾದ್ಯಂತ ಒಟ್ಟು 12 ಲಕ್ಷದ 36 ಸಾವಿರ ಅಭ್ಯರ್ಥಿಗಳು ಈ ಬಾರಿಯ ಮೆಡಿಕಲ್ ಪ್ರವೇಶ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.

ರಾಜಸ್ಥಾನ ಮೂಲದ ಮಹೇಶ್ ಕುಮಾರ್ ಅವರು NEET-UG 2025ರಲ್ಲಿ ಇಡೀ ಭಾರತದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ. ಮಧ್ಯಪ್ರದೇಶದ ಉತ್ಕರ್ಷ್ ಅವಧಿಯಾ ದ್ವಿತೀಯ ಸ್ಥಾನದಲ್ಲಿದ್ದಾರೆ. ದೆಹಲಿಯ ಅವಿಕಾ ಅಗರ್ವಾಲ್ ಅವರು ಮಹಿಳೆಯರಲ್ಲೇ ಅಗ್ರಸ್ಥಾನ ಹಾಗೂ ಇಡೀ ಭಾರತದಲ್ಲಿ AIR 5ನೇ ಸ್ಥಾನಗಳಿಸಿದ್ದಾರೆ.
ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಟಾಪ್ 10 ಅಭ್ಯರ್ಥಿಗಳು ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಗುಜರಾತ್, ಪಂಜಾಬ್ ರಾಜ್ಯಗಳ ಪಾಲಾಗಿದೆ. ಫಲಿತಾಂಶವನ್ನು NEET ಅಧಿಕೃತ ವೆಬ್‌ಸೈಟ್ ಆದ neet.nta.nic.in ಅಲ್ಲಿ ವೀಕ್ಷಿಸಬಹುದು.
ಅಧಿಕೃತ ವೆಬ್‌ಸೈಟ್‌ನಲ್ಲಿ ‘NEET UG 2025 Result’ ಅನ್ನು ಕ್ಲಿಕ್ ಮಾಡಬೇಕು. ನಂತರ ಅಪ್ಲಿಕೇಷನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ದಾಖಲಿಸಿದರೆ ನಿಮ್ಮ NEET-UG 2025 ಫಲಿತಾಂಶ ಲಭ್ಯವಿದೆ.



