
ಕುಮಟಾ –ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆಸಿದ ಕೆಸಿಇಟಿಯಲ್ಲಿ ಜಿಲ್ಲೆಯ ಪ್ರತಿಷ್ಠಿತ ಕುಮಟಾದ ಕೆನರಾ ಎಕ್ಸಲೆನ್ಸ್ ಪ.ಪೂ ಕಾಲೇಜಿನ 73 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಎದುರಿಸಿದ್ದು, ಒಬ್ಬ ವಿದ್ಯಾರ್ಥಿ 1000 ದ ಒಳಗಿನ, 4 ವಿದ್ಯಾರ್ಥಿಗಳು 5000 ದೊಳಗಿನ, 6 ವಿದ್ಯಾರ್ಥಿಗಳು 10000 ದೊಳಗಿನ ಅಗ್ರ ಶ್ರೇಣಿಯೊಂದಿಗೆ ರ್ಯಾಂಕ್ ಗಳಿಸುವುದರೊಂದಿಗೆ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಕುಮಾರ ಪ್ರಣವ ಎಮ್ ಭಟ್ಟ 938 ನೇ ರ್ಯಾಂಕ್, ಶ್ರದ್ಧಾ ಆರ್ ಭಟ್ಟ 1785, ಸೌರವ ಗಾಂವ್ಕರ 2172, ಆದರ್ಶ ಎಮ್ 2818, ಗಣೇಶ ಗೌಡ 7092, ಸುಜಿತ್ ಭಾಸ್ಕರ್ ಭಟ್ಟ 7908,ನಿತ್ಯಾನಂದ ಭಟ್ಟ 10587, ಅಪೂರ್ವಾ ಜಿ ಭಟ್ಟ 10787 ನೇ ರ್ಯಾಂಕ್ ಗಳಿಸಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ. ಈ ಎಲ್ಲಾ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಹೆಸರಾಂತ ವೈದ್ಯರಾಗಿರುವ ಡಾ. ಜಿ ಜಿ ಹೆಗಡೆ, ಆಡಳಿತ ಮಂಡಳಿಯ ವಿಶ್ವಸ್ಥರಾದ ಶ್ರೀ ಡಿ ಎನ್ ಭಟ್ಟ, ಪ್ರಾಚಾರ್ಯರಾದ ಶ್ರೀ ನಾಗರಾಜ ಜಿ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
