ಜೆ.ಇ.ಇ ಮೈನ್ಸ್ – 2025 ಪರೀಕ್ಷೆಯಲ್ಲಿ ಕೆನರಾ ಎಕ್ಸಲೆನ್ಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

ಕುಮಟಾ,(ಫೆಬ್ರವರಿ 13): ಶೈಕ್ಷಣಿಕ ಶ್ರೇಷ್ಠತೆ ಮತ್ತು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿರುವ ಸಂಸ್ಥೆಯಾಗಿ, ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಆಕಾಂಕ್ಷೆಗಳನ್ನು ಸಾಧಿಸುವ ವಿದ್ಯಾದೇಗುಲವಾಗಿ ರಾಜ್ಯದಾದ್ಯಂತ ಹೆಸರು ಮಾಡಿರುವ ಕುಮಟಾ ತಾಲೂಕಿನ ಗೋರೆಯಲ್ಲಿರುವ ಕೆನರಾ ಎಕ್ಸ್‌ಲೆನ್ಸ್‌ ಪಿ.ಯು ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಎಂತಹದ್ದು ಅನ್ನೋದಕ್ಕೆ ಮತ್ತೊಂದು ಹಿರಿಮೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು (ಎನ್.ಟಿ.ಎ) ನಡೆಸಿದ ರಾಷ್ಟ್ರ ಮಟ್ಟದ ಜೆ.ಇ.ಇ ಮೈನ್ಸ್ (ಪೇಪರ್ 1) 2025ರ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು, ಕುಮಟಾದ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಿಂದ ಪರೀಕ್ಷೆ ಎದುರಿಸಿದ ಒಟ್ಟೂ 41 ವಿದ್ಯಾರ್ಥಿಗಳಲ್ಲಿ 08 ವಿದ್ಯಾರ್ಥಿಗಳು ಅಂತಿಮ ಹಂತದ ಜೆ.ಇ.ಇ. ಅಡ್ವಾನ್ಸಡ್ 2025 ರ ಪರೀಕ್ಷೆ ಎದುರಿಸಲು ಅರ್ಹತೆಗಳಿಸುವ ಮೂಲಕ ಅತ್ಯದ್ಭುತ ಸಾಧನೆ ಮಾಡಿರುತ್ತಾರೆ.

ಪ್ರಣವ ಎಮ್ ಭಟ್ಟ (95.7627%) ಸೌರವ ಗಾಂವ್ಕರ್ (93.3137%), ಶ್ರದ್ಧಾ ಆರ್ ಭಟ್ಟ (92.9344%), ಆದರ್ಶ ಎಮ್ (90.9049%), ಅಮನ್ ಭಂಡಾರಿ (87.1197%), ಗಣೇಶ ಗೌಡ(84.7695%), ಸುಜಿತ ಭಟ್ಟ(81.6984%), ನಿತ್ಯಾನಂದ ಯು ಭಟ್ಟ(80.6622%) ಗಳಿಸಿ ಅತ್ಯದ್ಭುತ ಸಾಧನೆಗೈದು ಮುಂಬರುವ ರಾಷ್ಟ್ರಮಟ್ಟದ ಜೆ.ಇ.ಇ. ಅಡ್ವಾನ್ಸಡ್ ಪರೀಕ್ಷೆಯನ್ನು ಎದುರಿಸುವ ಅರ್ಹತೆ ಪಡೆದುಕೊಂಡಿದ್ದಾರೆ.

ರಾಷ್ಟ್ರವ್ಯಾಪಿ IITs, NITs, IIITs ಇದೇ ಮುಂತಾದ ತಾಂತ್ರಿಕ ಕ್ಷೇತ್ರದ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ BE/M.Tech ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಎದುರಿಸುವ ಈ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಕೆನರಾ ಎಕ್ಸಲೆನ್ಸ್ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ. ಜಿ ಹೆಗಡೆ, ಆಡಳಿತ ಮಂಡಳಿಯ ವಿಶ್ವಸ್ಥರಾದ ಡಿ. ಎನ್. ಭಟ್ಟ, ಪ್ರಾಚಾರ್ಯರಾದ ರಾಮ ಭಟ್ಟ ಪಿ, ಆಡಳಿತಾಧಿಕಾರಿ ಶಶಾಂಕ ಶಾಸ್ತ್ರಿ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪಾಲಕರು ಹೃತ್ಪೂರ್ವಕವಾಗಿ ಅಭಿನಂದಿಸಿ ಮುಂದಿನ ಹಂತದ ಪರೀಕ್ಷೆಗೆ ಶುಭ ಕೋರಿದ್ದಾರೆ.