ಮೇ. ೪ ಡಾ|| ವಿಠ್ಠಲ ಭಂಡಾರಿ ನೆನಪು-೪


ಹೊನ್ನಾವರ ಏ. ೩೦:
ಪ್ರಗತಿಪರ ಚಿಂತಕ, ಸಂಘಟಕ, ಲೇಖಕ, ಪ್ರಾಧ್ಯಾಪಕರಾಗಿದ್ದ ಡಾ|| ವಿಠ್ಠಲ ಭಂಡಾರಿ ಇವರ ನೆನಪಿನ ಸಹಯಾನಿ ಪ್ರೀತಿಯ ಪದಗಳು ಕಾರ್ಯಕ್ರಮ ಮೇ ೪ ರವಿವಾರ ಹೊನ್ನಾವರ ಕೆರೆಕೋಣನ ಸಹಯಾನದ ಅಂಗಳದಲ್ಲಿ ಒಂದು ದಿನ ನಡೆಯಲಿದೆ.
ಬೆಳಿಗ್ಗೆ ೧೦-೩೦ಕ್ಕೆ ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಈ ಸಲಹ ವಿಶೇಷ ಉಪನ್ಯಾಸ ಜನಜೀವನ ಮತ್ತು ಮತಧರ್ಮದ ನಿರಪೇಕ್ಷತೆ ಕುರಿತು ಕವಿವಿ ಸಹಾಯಕ ಪ್ರಾಧ್ಯಾಪಕಿ ಡಾ|| ಅನಸೂಯಾ ಕಾಂಬ್ಳೆ ಪ್ರಸ್ತುತ ಪಡಿಸುವರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಸಾಹಿತಿ ಕೃಷ್ಣಾ ನಾಯ್ಕ ಹಿಚಕಡ, ಸಹಾಯಾನದ ಗೌರವಾಧ್ಯಕ್ಷ ಶಾಂತಾರಾಮ ನಾಯ್ಕ ಪಾಲ್ಗೊಳ್ಳುವರು. ಕಾವ್ಯದ ಓದು ನಡೆಯಲಿದೆ. ಮಧ್ಯಾಹ್ನ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಅನ್ವೇಷಣೆಯ ಸಂಪಾದಕ ಆರ್.ಜಿ. ಹಳ್ಳಿ ನಾಗರಾಜ, ಪ್ರಕಾಶ ಉಡಿಕೇರಿ, ಸರಭಿ ರೇಣುಕಾಂಬೆ, ರಾಮ ನಾಯ್ಕ ಪಾಲ್ಗೊಳ್ಳುವರು. ಬೆಳಿಗ್ಗೆ ಸ್ವಾಮಿಗಮನಹಳ್ಳಿ ಇವರ ಹಾಡುಗಳಿವೆ. ಕಾವ್ಯದ ಓದು ಇದೆ. ಮಕ್ಕಳ ಯಕ್ಷಗಾನವಿದೆ. ಸದಾ ಎಲ್ಲರೊಂದಿಗೆ ಬೆರೆತು ಓಡಾಡುತ್ತಾ ವಿಚಾರ ವಿನಿಮಯ ಮಾಡುತ್ತಾ ನಿಷ್ಕಲ್ಮಶ ವ್ಯಕ್ತಿಯಾಗಿದ್ದ ವಿಠ್ಠಲರನ್ನು ಕೋವೀಡ್ ಕಬಳಿಸಿತು. ಅವರ ನೆನಪಿನ ಕಾರ್ಯಕ್ರಮವನ್ನು ಅವರ ಸಹೋದರಿಯರಾದ ಇಂದಿರಾ, ಮಾಧವಿ ಮತ್ತು ಪತ್ನಿ ಯಮುನಾ ನಡೆಸುತ್ತಿದ್ದು ಸಾಹಿತ್ಯ ಮತ್ತು ವಿಠ್ಠಲನ ಅಭಿಮಾನಿಗಳು ಆಗಮಿಸಬೇಕೆಂದು ಕೋರಿದ್ದಾರೆ.