IPL 2025: RCB ಗ್ರೀನ್ ಜೆರ್ಸಿ ಪಂದ್ಯಕ್ಕೆ ಡೇಟ್ ಫಿಕ್ಸ್

IPL 2025 RCB vs RR: 2011 ರಿಂದ ಐಪಿಎಲ್​ನಲ್ಲಿ ಗೋ ಗ್ರೀನ್ ಅಭಿಯಾನ ಅರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರತಿ ಸೀಸನ್​ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಾ ಬಂದಿದೆ. ಅದರಂತೆ ಈ ಬಾರಿ ಆರ್​ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಗ್ರೀನ್ ಜೆರ್ಸಿ ಪಂದ್ಯಕ್ಕೆ ದಿನಾಂಕ ನಿಗದಿಯಾಗಿದೆ. ಅದರಂತೆ ಏಪ್ರಿಲ್ 13 ರಂದು ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ತಂಡ ಗ್ರೀನ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಜೈಪುರ್​ನ ಸವಾಯಿ ಮಾನ್​​ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಗ್ರೀನ್ ಜೆರ್ಸಿ ಯಾಕೆ?

2011 ರಿಂದ ಐಪಿಎಲ್​ನಲ್ಲಿ ಗೋ ಗ್ರೀನ್ ಅಭಿಯಾನ ಅರಂಭಿಸಿರುವ ಆರ್​ಸಿಬಿ ಪ್ರತಿ ಸೀಸನ್​ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಾ ಬಂದಿದೆ. ಇದರ ಮೂಲ ಉದ್ದೇಶ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು. ಅದರಲ್ಲೂ ಮರಗಳನ್ನು ಉಳಿಸಿ-ಬೆಳೆಸಿ ಎಂಬ ಸಂದೇಶ ಸಾರಲು ಆರ್​ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ.

ಇದಾಗ್ಯೂ 2021 ರ ಐಪಿಎಲ್​ ವೇಳೆ ಆರ್​ಸಿಬಿ ಗ್ರೀನ್ ಜೆರ್ಸಿ ಬದಲಿಗೆ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿದಿತ್ತು ಎಂಬುದು ವಿಶೇಷ. ಅಂದು ಕೊರೋನಾ ವಾರಿಯರ್ಸ್​ಗೆ ಗೌರವ ಸೂಚಿಸುವ ಸಲುವಾಗಿ ಆರ್​ಸಿಬಿ ಪಿಪಿಐ ಕಿಟ್​ ಬಣ್ಣದ ಜೆರ್ಸಿಯಲ್ಲಿ ಕೆಕೆಆರ್ ವಿರುದ್ಧ ಪಂದ್ಯವಾಡಿತ್ತು.

ಇದೀಗ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೋ ಗ್ರೀನ್ ಅಭಿಯಾನದಡಿಯಲ್ಲಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಅದು ಸಹ ರಾಜಸ್ಥಾನ್ ರಾಯಲ್ ವಿರುದ್ಧ, ಪಿಂಕ್ ಸಿಟಿ ಜೈಪುರ್​ನಲ್ಲಿ ಎಂಬುದು ವಿಶೇಷ.