ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು: ಹಣದ ಆಸೆಗಾಗಿ ನಿಷೇಧದ ಬಳಿಕವೂ ಬೆಟ್ಟಕ್ಕೆ ಕರೆದೊಯ್ದ ಸಿಬ್ಬಂದಿ

ಚಾಮರಾಜನಗರ, ಏಪ್ರಿಲ್​ 12: ಕೇರಳ ಸಿನಿಮಾದ ಚಿತ್ರೀಕರಣಕ್ಕೆ ಅನುಮತಿ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಬಂಡೀಪುರ (Bandipur) ಅರಣ್ಯ ಸಿಬ್ಬಂದಿಗಳು ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಸಂಜೆ 4.30ರ ಬಳಿಕ ನಿಷೇಧ ಇದೆ. ಆದರೆ 4.30 ರ ಬಳಿಕವು ಅಧಿಕ ಹಣದ ಆಸೆಗಾಗಿ ತಮ್ಮ ವಾಹನದಲ್ಲೇ ಸಿಬ್ಬಂದಿಗಳು ಕೆಲವರನ್ನು ಕರೆದೊಯ್ದಿದ್ದಾರೆ. ಅರಣ್ಯ ಸಿಬ್ಬದಿಯ ಕಳ್ಳಾಟ ಮೊಬೈಲ್ ಕ್ಯಾಮರೆದಲ್ಲಿ ಸೆರೆ ಆಗಿದೆ.