ಮುಕೇಶ್ ಅಂಬಾನಿ ಐಷಾರಾಮಿ ನೂತನ ಮನೆಯ ಮೊದಲ ತಿಂಗಳ ಕರೆಂಟ್ ಬಿಲ್ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ..!

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಎಲ್ಲರಿಗೂ ಕೂಡ ಚಿರಪರಿಚಿತ. ಹೌದು ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕನಾಗಿರುವ ಮುಕೇಶ್ ಅವರ ವಾಸಿಸುತ್ತಿರುವ 27 ಅಂತಸ್ತಿನ ಮಹಲು ಆಂಟಿಲಿಯಾ ನಿವಾಸದ ಬಗ್ಗೆ ಕೇಳಿರಬಹುದು. ವಿಶ್ವದ ಎರಡನೇ ದುಬಾರಿ ನಿವಾಸಗಳ ಸಾಲಿಗೆ ಸೇರಿರುವ ಆಂಟಿಲಿಯಾದ ಈ ಭವ್ಯ ಬಂಗಲೆಯಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಕಾಣಬಹುದು. ಹೌದು, ಈ ಭವ್ಯ ಬಂಗಲೆಯ ಮೊದಲ ತಿಂಗಳ ಕರೆಂಟ್ ಬಿಲ್ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ, ಈ ಕುರಿತಾದ ಮಾಹಿತಿ ಇಲ್ಲಿದೆ.

ಶ್ರೀಮಂತ ವ್ಯಕ್ತಿ ಎಂದ ಮೇಲೆ ಕೇಳಬೇಕೇ, ಅವರು ಬದುಕು ರೀತಿ ಕೂಡ ಅಷ್ಟೇ ಐಷಾರಾಮಿತನದಿಂದ ಕೂಡಿರುತ್ತದೆ. ಮನೆಯ ಕೆಲಸಕ್ಕೆ ನೂರಾರು ಜನ ಆಳುಕಾಳುಗಳು, ಭವ್ಯ ಬಂಗಲೆ, ಮನೆಯೊಳಗೆ ಎಲ್ಲಾ ಸೌಕರ್ಯಗಳು ಯಾವುದಕ್ಕೂ ಎಳ್ಳಷ್ಟೂ ಕೊರತೆಯಿರಲ್ಲ. ಈ ವಿಚಾರದಲ್ಲಿ ಭಾರತದ ಶ್ರೀಮಂತ ವ್ಯಕ್ತಿ, ಉದ್ಯಮಿ ಮುಕೇಶ್ ಅಂಬಾನಿ  ಕೂಡ ಹೊರತಾಗಿಲ್ಲ. ಯಶಸ್ವಿ ಉದ್ಯಮಿಯಾಗಿ ಕೋಟ್ಯಾನು ಕೋಟಿ ಆಸ್ತಿಯ ಒಡೆಯ ಮುಕೇಶ್ ಅಂಬಾನಿಯ ನೆಲೆಸಿರುವ ಮುಂಬೈನ 27 ಅಂತಸ್ತಿನ ಮಹಲು ಆಂಟಿಲಿಯಾದ ಬಗ್ಗೆ ನೀವು ಕೇಳಿರುತ್ತೀರಿ. ಈ ಆಧುನಿಕ ಸೌಕರ್ಯಗಳನ್ನು ಒಳಗೊಂಡ ಈ ಬಂಗಲೆಯ ಮೊದಲ ಕರೆಂಟ್ ಬಿಲ್ ಎಷ್ಟಿರಬಹುದು ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ. ಹೌದು ಮಧ್ಯಮ ವರ್ಗದ ವ್ಯಕ್ತಿಯೂ ಜೀವನ ಪರ್ಯಂತ ದುಡಿದರೂ ಈ ಕರೆಂಟ್ ಬಿಲ್ ಪಾವತಿಸಲು ಸಾಧ್ಯವಗಲ್ಲ.

ಆಂಟಿಲಿಯಾ ನಿವಾಸದ ಮೊದಲ ಕರೆಂಟ್ ಬಿಲ್ ಮೊತ್ತ ಎಷ್ಟು?

ಈ ನೂತನ ಮನೆ ನಿರ್ಮಾಣವಾದ ಬಳಿಕ ಮೊದಲ ತಿಂಗಳು ಮುಕೇಶ್ ಅಂಬಾನಿಯ ಆಂಟಿಲಿಯಾ ಮನೆಯಲ್ಲಿ ಬಳಸಿದ ವಿದ್ಯುತ್ ಯೂನಿಟ್ 6,37,240 ಆಗಿತ್ತು. ಈ ವೇಳೆ ಮುಕೇಶ್ ಅಂಬಾನಿಗೆ ಬಂದ ಬಿಲ್ ಮೊತ್ತ 70,69,488 (70.69 ಲಕ್ಷ ರೂಪಾಯಿ). ಇದು ಒಂದು ತಿಂಗಳ ಕರೆಂಟ್ ಬಿಲ್ ಆಗಿದ್ದು, ಇಷ್ಟೆಲ್ಲಾ ಹೈಟೆಕ್ ಸೌಲಭ್ಯಗಳು ಇರುವ ಕಾರಣ ಈ ವಿದ್ಯುತ್ ಬಿಲ್ ಬರಲು ಪ್ರಮುಖ ಕಾರಣವಾಗಿದೆ. ಆದರೆ, ಮುಕೇಶ್ ಅಂಬಾನಿ ಪಾವತಿಸಿದ ಒಂದು ತಿಂಗಳ ಕರೆಂಟ್ ಬಿಲ್ ನಲ್ಲಿ ಮುಂಬೈನಲ್ಲಿ ಹೊಚ್ಚ ಹೊಸ ಐಷಾರಾಮಿ ಕಾರು ಅಥವಾ ಅಪಾರ್ಟ್ಮೆಂಟ್ ಖರೀದಿಸಬಹುದು.

ಈ ಐಷಾರಾಮಿ ಬಂಗಲೆಯಲ್ಲಿ ಆಧುನಿಕ ಸೌಲಭ್ಯಗಳು ಲಭ್ಯ

2010 ರಲ್ಲಿ ಮುಂಬೈನಲ್ಲಿರುವ 27 ಅಂತಸ್ತಿನ ಮಹಲು ಆಂಟಿಲಿಯಾ ಸರಿಸುಮಾರು 1500 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ 27 ಅಂತಸ್ತಿನ ಭವ್ಯ ಬಂಗಲೆ ನಿರ್ಮಾಣಕ್ಕೆ ಸರಿಸುಮಾರು 6 ವರ್ಷಗಳು ತೆಗೆದುಕೊಂಡಿದ್ದು, ಈ ಭವ್ಯ ಬಂಗಲೆಯಲ್ಲಿ ಆಧುನಿಕ ಸೌಲಭ್ಯಗಳಿಗೆ ಯಾವುದೇ ಕೊರತೆಯಿಲ್ಲ. ಐವತ್ತು ಆಸನಗಳ ಥಿಯೇಟರ್, ಟರೇಸ್ ಗಾರ್ಡನ್, ಸ್ವಿಮ್ಮಿಂಗ್ ಪೂಲ್, ಮೂರು ಹೆಲಿಪ್ಯಾಡ್‌ಗಳು, ಟೆರೇಸ್ ಗಾರ್ಡನ್, ಐಷಾರಾಮಿ ಸ್ಪಾ, ಒಂಬತ್ತು ಹೈ-ಸ್ಪೀಡ್ ಎಲಿವೇಟರ್‌ಗಳು, ವಿದ್ಯುತ್ ದೀಪಗಳು, ಆರೋಗ್ಯ ಕೇಂದ್ರ ಹಾಗೂ ಸುಂದರವಾದ ದೇವಾಲಯ ಸೇರಿದಂತೆ ಇನ್ನಿತ್ತರ ಹತ್ತು ಹಲವು ಐಷಾರಾಮಿ ಸೌಲಭ್ಯಗಳನ್ನು ಕಾಣಬಹುದು. ಅಷ್ಟೇ ಅಲ್ಲದೇ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಇದ್ದು, ಇಲ್ಲಿ 160 ಕ್ಕೂ ಹೆಚ್ಚು ಕಾರ್ ಪಾರ್ಕ್ ಮಾಡಬಹುದಾಗಿದೆ. ಈ ಸೌಲಭ್ಯವನ್ನು ನೋಡಿದಾಗ ಈ ಭವ್ಯ ಬಂಗಲೆಯಲ್ಲಿ ಯಾವುದಕ್ಕೂ ಕೊರತೆಯಿಲ್ಲ ಎನ್ನುವುದಂತೂ ಸ್ಪಷ್ಟವಾಗುತ್ತದೆ.