ಉತ್ತಮ ಟಿಆರ್​ಪಿ ಮಧ್ಯೆಯೂ ಕೊನೆಯಾಗಲಿದೆ ಕಲರ್ಸ್​ನ ಟಾಪ್ 1 ಧಾರಾವಾಹಿ?

ಕಲರ್ಸ್​ನ ಧಾರಾವಾಹಿಯೊಂದು ಶೀಘ್ರದಲ್ಲೇ ಕೊನೆಗೊಳ್ಳುವ ಸುದ್ದಿ ಹರಡುತ್ತಿದೆ. ಇದು ಕಲರ್ಸ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಆದಾಗ್ಯೂ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ವಾಹಿನಿಯಿಂದ ಇನ್ನೂ ಅಧಿಕೃತ ಘೋಷಣೆ ಬಂದಿಲ್ಲವಾದರೂ, ಅಭಿಮಾನಿಗಳಲ್ಲಿ ಕಳವಳ ಮೂಡಿದೆ. ಆ ಬಗ್ಗೆ ವಾಹಿನಿ ಕಡೆಯಿಂದ ಪ್ರಕಟಣೆ ಬಂದರೆ ಫ್ಯಾನ್ಸ್​ಗೆ ಸ್ಪಷ್ಟನೆ ಸಿಕ್ಕಂತಾಗುತ್ತದೆ.

ಕಿರುತೆರೆಯಲ್ಲಿ ಧಾರಾವಾಹಿಗಳ ಟಿಆರ್​ಪಿ (TRP) ತುಂಬಾನೇ ಮುಖ್ಯವಾಗುತ್ತದೆ. ಇದರ ಆಧಾರಾದ ಮೇಲೆ ಧಾರಾವಾಹಿಯನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ನಿರ್ಧಾರವನ್ನು ಮಾಡಲಾಗುತ್ತದೆ. ಇನ್ನೂ ಕೆಲವೊಮ್ಮೆ ಉತ್ತಮ ಟಿಆರ್​ಪಿ ಹೊಂದಿರುವ ಧಾರಾವಾಹಿಯನ್ನು ಪೂರ್ಣಗೊಳಿಸಲಾಗುತ್ತದೆ. ಈಗ ಕಲರ್ಸ್​ನ ಟಾಪ್ 1 ಧಾರಾವಾಹಿ ಶೀಘ್ರವೇ ಕೊನೆ ಆಗಲಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಧಾರಾವಾಹಿ ತಂಡದವರಾಗಲಿ, ವಾಹಿನಿ ಕಡೆಯಿಂದಾಗಲಿ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆ ವಿಚಾರ ಗೊತ್ತಾದರೆ ಫ್ಯಾನ್ಸ್​ಗೆ ಸ್ಪಷ್ಟನೆ ಸಿಕ್ಕಂತಾಗುತ್ತದ.

ಹಾಗಾದರೆ ಕೊನೆ ಆಗುತ್ತಿರುವ ಧಾರಾವಾಹಿ ಯಾವುದು? ‘ಲಕ್ಷ್ಮೀ ಬಾರಮ್ಮ’. ಆರಂಭದಲ್ಲಿ ಅಕ್ಕ-ತಂಗಿ ಕಥೆಯನ್ನು ಒಟ್ಟಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ, ನಂತರ ಅಕ್ಕನ ಕಥೆ ಬೇರೆ ಹಾಗೂ ತಂಗಿಯ ಕಥೆಯನ್ನು ಬೇರೆ ಮಾಡಲಾಯಿತು. ಈಗ 7 ಗಂಟೆಗೆ ಭಾಗ್ಯನ ಕಥೆ ಇರುವ ‘ಭಾಗ್ಯಲಕ್ಷ್ಮೀ’ ಪ್ರಸಾರ ಕಂಡರೆ, 7.30ಕ್ಕೆ ‘ಲಕ್ಷ್ಮೀ ಬಾರಮ್ಮ ಪ್ರಸಾರ ಕಾಣುತ್ತಿದೆ.

ಹಾಗಾದರೆ, ‘ಲಕ್ಷ್ಮೀ ಬಾರಮ್ಮ’ ಟಿಆರ್​ಪಿ ಕುಸಿದು ಹೋಗಿದೆಯಾ? ಖಂಡಿತವಾಗಿಯೂ ಇಲ್ಲ. ಸದ್ಯ ಕಲರ್ಸ್ ಧಾರಾವಾಹಿಗಳನ್ನಷ್ಟೇ ನೋಡೋದಾದರೆ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯೇ ಟಾಪ್​ನಲ್ಲಿದೆ! ಹೌದು, 11ನೇ ವಾರದ ಟಿಆರ್​ಪಿ ಲೆಕ್ಕಾಚಾರದ ಪ್ರಕಾರ ಕಲರ್ಸ್ ಸೀರಿಯಲ್​ಗಳ ಪೈಕಿ ಅತಿ ಹೆಚ್ಚು ಟಿಆರ್​ಪಿ ಸಿಕ್ಕಿರೋದು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಗೆ. ಆ ಬಳಿಕ ‘ನಿನಗಾಗಿ’, ‘ಭಾರ್ಗವಿ ಎಲ್​ಎಲ್​ಬಿ’ ಧಾರಾವಾಹಿಗಳು ಇವೆ.

ಹಾಗೆ ನೋಡೋದಾದರೆ ‘ಭಾಗ್ಯಲಕ್ಷ್ಮೀ’ ಧಾರಾವಾಹಿಗೆ ಟಿಆರ್​ಪಿ ಕಡಿಮೆ ಇದೆ. ಈ ಧಾರಾವಾಹಿ ಕಲರ್ಸ್ ಸೀರಿಯಲ್​ಗಳ ಪೈಕಿ ನಾಲ್ಕನೇ ಸ್ಥಾನದಲ್ಲಿ ಇದೆ. ಆದಾಗ್ಯೂ ವಾಹಿನಿಯವರು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯನ್ನೇ ಕೊನೆ ಮಾಡುವ ನಿರ್ಧಾರಕ್ಕೆ ಬಂದಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.