ಶ್ರೀ ಕ್ಷೇತ್ರ ಬಂಗಾರ ಮಕ್ಕಿಯ ಕುಂಭಮೇಳ ಮತ್ತು ರಥೋತ್ಸವಕ್ಕೆ ಯಶವಂತಪುರ-ಕಾರವಾರ ರೈಲಿನಲ್ಲಿ ಹೆಚ್ಚುವರಿ ಭೋಗಿಗಳ ವ್ಯವಸ್ಥೆ.

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ವೀರಾಂಜನೇಯ ದೇವಸ್ಥಾನದಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 13 ರವರೆಗೆ ನಡೆಯಲಿರುವ ಪವಿತ್ರ ಕುಂಭಮೇಳ ಹಾಗೂ ರಥೋತ್ಸವಕ್ಕೆ ಬೆಂಗಳೂರು ಭಾಗದಿಂದ ಆಗಮಿಸುವ ಯಾತ್ರಿಕರಿಗೆ ಅನುಕೂಲವಾಗುವಂತೆ ಯಶವಂತಪುರ-ಕಾರವಾರ ರೈಲಿನಲ್ಲಿ ಎರಡು ಹೆಚ್ಚುವರಿ ಭೋಗಿಗಳನ್ನು ಒದಗಿಸಲಾಗಿದೆ.
ಮಾನ್ಯ ಸಂಸದರು ಈ ಕುರಿತು ಮಾನ್ಯ ಕೇಂದ್ರ ರೇಲ್ವೆ ರಾಜ್ಯ ಸಚಿವರಾದ ಶ್ರೀ ವಿ ಸೋಮಣ್ಣರವರಿಗೆ ಮನವಿ ಸಲ್ಲಿಸಿದ್ದರು, ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಕೇಂದ್ರ ಸಚಿವರು ಮಾರ್ಚ್ 31 ರಿಂದ ಏಪ್ರಿಲ್ 13 ರವರೆಗೆ ಎರಡು ಹೆಚ್ಚುವರಿ ಬೋಗಿಗಳನ್ನು ಮಂಜೂರು ಮಾಡಿದ್ದಾರೆ.
ಈ ವಿಶೇಷ ಸೌಲಭ್ಯವು ಕುಂಭಮೇಳಕ್ಕೆ ಆಗಮಿಸುವ ಯಾತ್ರಿಕರಿಗೆ ಪ್ರಯಾಣವನ್ನು ಸುಗಮಗೊಳಿಸಲಿದೆ. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಯಾತ್ರಿಕರಲ್ಲಿ ವಿನಂತಿಸಿಕೊಳ್ಳಲಾಗಿದೆ. ಮಾನ್ಯ ಕೇಂದ್ರ ಸಚಿವರಾದ ಶ್ರೀ ಸೋಮಣ್ಣರವರಿಗೆ ಸಂಸದರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.