ಗೋಕರ್ಣ ಉತ್ಸವದಲ್ಲಿ ಎಸ್​ಪಿ ನಾರಾಯಣ ಗಾಯನ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕಡಲ ತೀರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ  “ಗೋಕರ್ಣ ಉತ್ಸವ ಕಾರ್ಯಕ್ರಮದಲ್ಲಿ” ಉತ್ತರ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಾರಾಯಣ ಅವರು “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು” ಎಂಬ ಹಾಡನ್ನು ಹಾಡಿದರು.  ಸರಿಗಮಪ ಸ್ಪರ್ಧಿಗಳ ಜೊತೆ ಎಸ್ಪಿ ನಾರಾಯಣ ಧ್ವನಿಗೂಡಿಸಿದರು.  ಮೂರು ದಿನಗಳ ಕಾಲ ಆಯೋಜಿಸಿದ್ದ ಗೋಕರ್ಣ ಉತ್ಸವಕ್ಕೆ ಶುಕ್ರವಾರ ತೆರೆ ಬಿದ್ದಿತು.