ಯಲ್ಲಾಪುರ : ಸುಗಮ ಸಂಚಾರಕ್ಕೆ ಅನುಕೂಲದ ಜೊತೆಗೆ ರಸ್ತೆ ಸುರಕ್ಷತಾ ದೃಷ್ಟಿಯಿಂದ ಪೊಲೀಸ್ ಇಲಾಖೆಯು ತಾಲೂಕಿನ ಅರಬೈಲ್ ಘಟ್ಟದ ತಿರುವುಗಳಲ್ಲಿ ಗುರುವಾರ ಕಾನ್ವೆಕ್ಸ್ ಮಿರರ್ ಅಳವಡಿಸಿದೆ.
ವಾಹನ ಸವಾರರಿಗೆ ಘಟ್ಟದ ತಿರುವುಗಳಲ್ಲಿ ಹಿಂಬದಿಯ ವಾಹನಗಳನ್ನು ದೂರದಿಂದಲೆ ಗುರುತಿಸಲು ಅನುಕೂಲ ಆಗಲಿದೆ. ಜೊತೆಗೆ ಘಟ್ಟದ ತಿರುವುಗಳಲ್ಲಿ ಪದೇ,ಪದೆ ಸಂಭವಿಸುವ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದ್ದು ಇಲಾಖೆಯ ಈ ಕಾರ್ಯ ವೈಖರಿಗೆ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.