ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಸಿ ನ್ಯಾಯಾಲಯದ ಹೆಚ್ಚುವರಿ ಎಪಿಪಿ

ಶಿರಸಿ: (ಫೆಬ್ರವರಿ 28): ಉತ್ತರ ಕನ್ನಡ ಜಿಲ್ಲೆಯ ಶಿರಸಿ ನ್ಯಾಯಾಲಯದ ಹೆಚ್ಚುವರಿ ಎಪಿಪಿ (ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್‌) ಪ್ರಕಾಶ್ ಲಮಾಣಿ ಅವರು ಲೋಕಾಯುಕ್ತ ಬಲೆ ಬದ್ದಿದ್ದಾರೆ. ಪ್ರಕರಣವೊಂದರ ಆರು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಹಿಡಿದಿದ್ದಾರೆ. ಸೀಜ್ ಆಗಿದ್ದ ಮುದ್ದೆ ಮಾಲನ್ನು ರಿಲೀಸ್ ಮಾಡಿಸಲು ಪವನ್ ಕುಮಾರ್ ಅವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಇಂದು (ಫೆಬ್ರವರಿ 28) ಪವನ್ ಕುಮಾರ್ ಅವರಿಂದ 6 ಸಾವಿರ ರೂ. ಲಂಚದ ಹಣ ಪಡೆಯುತ್ತಿರುವಾಗ ಲೋಕಾಯುಕ್ತ ಇನ್ಸ್​ಪೆಕ್ಟರ್ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ದಾಳಿ ಮಾಡಿ ಹಿಡಿದಿದ್ದಾರೆ. ಸದ್ಯ ಎಪಿಪಿ ಪ್ರಕಾಶ್ ಲಾಮಾಣಿ ಅವರನ್ಜು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.