ಬಿಎಂಟಿಸಿ ಬಸ್ ಹರಿದು ಮಹಿಳೆ ಸಾವು

ಬೆಂಗಳೂರು, ಫೆಬ್ರವರಿ 02: ಬೈಕ್​​ನಿಂದ ಕೆಳಗೆ ಬಿದ್ದ ಮಹಿಳೆ ಮೇಲೆ ಬಿಎಂಟಿಸಿ ಹರಿದ ಘಟನೆ ಬೆಂಗಳೂರಿನ ನಾಯಂಡನಹಳ್ಳಿ ಬಳಿ ನಡೆದಿದೆ. ಕಾಮಾಕ್ಷಿಪಾಳ್ಯದ ನಿವಾಸಿ ಸರೋಜಾ (42) ಮೃತ ದುರ್ದೈವಿ. ಜ್ಞಾನಭಾರತಿಯಲ್ಲಿ ಮದುವೆ ಮುಗಿಸಿಕೊಂಡು ರಾತ್ರಿ 9.30 ರ ಸುಮಾರಿಗೆ ಹೋಂಡಾ ಆ್ಯಕ್ಟಿವಾದಲ್ಲಿ ಸೋದರನ ಜೊತೆ ಬೈಕ್​ನಲ್ಲಿ ಸರೋಜ ಮನೆಗೆ ಹೊರಟಿದ್ದರು.
ದಾರಿಯಲ್ಲಿ ಮುಂದೆ ನಿಂತಿದ್ದ ಕಾರಿನ ಡೋರ್ ಏಕಾಏಕಿ ತೆರೆದಿದೆ. ಇದರಿಂದ, ಡೋರ್​​ಗೆ ಟಚ್ ಆಗಿ ಬೈಕ್​ನ ಹಿಂಬದಿ ಕುಳತಿದ್ದ ಸರೋಜಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದೆ ಬರುತ್ತಿದ್ದ ಬಿಎಂಟಿಸಿ ಬಸ್ ಸರೋಜಾ ಮೇಲೆ ಹರಿದಿದೆ. ಸರೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

2024ರಲ್ಲಿ ಒಂದೇ ತಿಂಗಳಲ್ಲಿ 4 ಸಾವು

ಅಕ್ಟೋಬರ್ 09 : ಬಿಎಂಟಿಸಿಗೆ ಮೂರು ವರ್ಷದ ಮಗು ಬಲಿ

ಅಕ್ಟೋಬರ್ 14 : ಬಸ್​ ಡಿಕ್ಕಿಯಾಗಿ ಇಂಜಿನಿಯರಿಂಗ್​ ವಿದ್ಯಾರ್ಥಿ ಸಾವು

ಅಕ್ಟೋಬರ್ 22 : ಬೈಕ್​ಗೆ ಬಸ್​ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ಅಕ್ಟೋಬರ್ 29 : ಬಿಎಂಟಿಸಿ ಬಸ್​ ಡಿಕ್ಕಿಯಾಗಿ ಬೈಕ್​ ಸವಾರ ಬಲಿ

ಡಿಸೆಂಬರ್ 28 : ಬಿಎಂಟಿಸಿ ಬಸ್​ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಸಾವು