ಮಹಾ ಕುಂಭಮೇಳ – ಬೆಂಗಳೂರು To ಪ್ರಯಾಗ್‌ರಾಜ್‌ ವಿಮಾನ ಟಿಕೆಟ್‌ ದರ ದುಬಾರಿಯೋ ದುಬಾರಿ

ಬೆಂಗಳೂರು: 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಕುಂಭಮೇಳವನ್ನ ಕಣ್ತುಂಬಿಕೊಳ್ಳಲು ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಪ್ರಯಾಗ್‌ರಾಜ್‌ಗೆ ಭೇಟಿ ಕೊಡ್ತಿದ್ದಾರೆ.

ಬುಧವಾರ (ನಾಳೆ) ವಿಶೇಷವಾದ ಮೌನಿ ಅಮವಾಸ್ಯೆ ದಿನವಾಗಿರೋದ್ರಿಂದ ಪ್ರಯಾಗ್‌ರಾಜ್‌ನಲ್ಲಿರೋ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ರೇ ಎಲ್ಲವೂ ಒಳ್ಳೆಯದಾಗುತ್ತೆ, ಆರೋಗ್ಯ ವೃದ್ಧಿಸುತ್ತೆ, ಕಷ್ಟಕಾರ್ಪಣ್ಯಗಳು ನಶಿಸುತ್ತದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಬುಧವಾರ ಕುಂಭಮೇಳದಲ್ಲಿ 10 ರಿಂದ 15 ಕೋಟಿ ಜನ ಸೇರುವ ನಿರೀಕ್ಷೆ ಇದೆ.

ಬುಧವಾರ ಪ್ರಯಾಗ್‌ರಾಜ್‌ಗೆ ಹೋಗಲು ವಿಮಾನದ ಟಿಕೆಟ್‌ ಬುಕ್ ಮಾಡಲು ಹೊರಟವರಿಗೆ ಡಬಲ್ ಶಾಕ್ ಆಗಿದೆ. ಹೌದು.. ಬುಧವಾರ ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗಿರುವ ಫ್ಲೈಟ್‌ ಟಿಕೆಟ್‌ ದರ 30 ರಿಂದ 39,000 ವರೆಗೆ ಏರಿಕೆಯಾಗಿದ್ದು, ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗೆ ಹೋಗುವ ಅಷ್ಟು ವಿಮಾನಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಇದರಿಂದ ಟಿಕೆಟ್ ದರ ಹೆಚ್ಚಾಗಿದರೂ ಪರವಾಗಿಲ್ಲ, ಇತಂಹ ಮಹಾಪುಣ್ಯದ ದಿನ ಹೇಗಾದರೂ ಮಾಡಿ ಕುಂಭಮೇಳದ ಮಹಾ ಸ್ನಾನ ಮಾಡಬೇಕು ಅಂತಿದ್ದವರಿಗೆ ಫೈಟ್‌ಗಳು ಹೌಸ್ ಪುಲ್ ಆಗಿರೋದು ಬೇಸರ ತಂದಿದೆ.