
ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿಯ ಈ ದಿನ ಸೋಮವಾರ, ಹಸ್ತ ನಕ್ಷತ್ರ, ಸುಕರ್ಮ ಯೋಗ, ವಿಷ್ಟಿ ಕರಣ. ಎಲ್ಲಾ 12 ರಾಶಿಯವರಿಗೆ ಇಂದಿನ ದಿನ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ವೃತ್ತಿಪರ ಕ್ಷೇತ್ರದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ಯಾವುದೇ ಪ್ರಮುಖ ಕೆಲಸಗಳಲ್ಲಿ ಕೇವಲ ಗೆಳೆಯರನ್ನು ನಂಬಿ ಕೈಕಟ್ಟಿ ಕೂರದೆ ನಿಮ್ಮ ಪ್ರಯತ್ನವನ್ನು ಮುಂದುವರೆಸಿ. ಸಮಯ ನಿರ್ವಹಣೆಗೆ ವಿಶೇಷ ಗಮನ ಅಗತ್ಯವಾಗಿದೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನಿಮ್ಮ ಯೋಜನೆಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನಿರ್ವಹಿಸಿ. ಯಾವುದೇ ವಿಚಾರದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಸಮತೋಲಿತ ರೀತಿಯಲ್ಲಿ ಪ್ರಸ್ತುತಪಡಿಸಿ. ವ್ಯಾಪಾರ ಮತ್ತು ಉದ್ಯಮದಲ್ಲಿ ನಿಮ್ಮ ಪ್ರಯತ್ನಗಳು ಅಭಿವೃದ್ಧಿ ಹೊಂದುತ್ತವೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಕುಟುಂಬದೊಂದಿಗೆ ಸಂತೋಷದಾಯಕ ಕ್ಷಣವನ್ನು ಆನಂದಿಸುವಿರಿ. ಪ್ರವಾಸ ಮನರಂಜನೆಯ ಅವಕಾಶಗಳು ಇಂದು ನಿಮ್ಮ ಪಾಳಿಗಿದೆ. ಹಿರಿಯರೊಂದಿಗೆ ಸಂವಹನವನ್ನು ಹೆಚ್ಚಿಸುವುದರಿಂದ ಆಘಾದ ಜ್ಞಾನವನ್ನು ಸಂಪಾದಿಸುವಿರಿ. ಕೆಲಸದಲ್ಲಿ ನಿಮ್ಮ ಬದ್ಧತೆಯನ್ನು ಕಾಪಾಡಿಕೊಳ್ಳಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಸಾಮಾಜಿಕ ವಿಷಯಗಳಲ್ಲಿ ವಿಶೇಷ ಕಾಳಜಿ ಅಗವ್ಯವಿದೆ. ಆಗಷ್ಟೇ ನಿಮ್ಮ ವ್ಯಕ್ತಿತ್ವವು ಪ್ರಭಾವಶಾಲಿಯಾಗಿ ಉಳಿಯಲಿದೆ. ವಾಣಿಜ್ಯ ವ್ಯವಹಾರಗಳಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಫಲವನ್ನು ಪಡೆಯಬಹುದು. ಒಡಹುಟ್ಟಿದವರೊಂದಿಗೆ ಅತ್ಯುತ್ತಮ ಸಮಯ ಕಳೆಯುವಿರಿ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಕುಟುಂಬದ ಮೌಲ್ಯಗಳು ಮತ್ತು ಸಂಪ್ರದಾಯಗಳಿಗೆ ಒಟ್ಟು ನೀಡಿ. ಯಾವುದಾದರೂ ಚರ್ಚೆ ಮತ್ತು ಸಂವಾಹನಗಳಲ್ಲಿ ಮುಕ್ತವಾಗಿ ಭಾಗವಹಿಸಿ. ಕೌಟುಂಬಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಒಳ್ಳೆಯ ಸುದ್ದಿ ಸಿಗಬಹುದು.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ನಿಮ್ಮ ಸೃಜನಶೀಲ ಪ್ರಯತ್ನಗಳಿಗೆ ಬೇರೆಯವರು ಪ್ರಭಾವಿತರಾಗುತ್ತಾರೆ. ಕುಟುಂಬದ ಬೆಂಬಲದಿಂದ ಪ್ರಮುಖ ಕೆಲಸಗಳಲ್ಲಿ ಜಯ ಸಾಧಿಸುವಿರಿ. ನಿಮ್ಮ ಪ್ರೀತಿಪಾತ್ರರಿಂದ ಒಳ್ಳೆಯ ಸುದ್ದಿಯೊಂದು ಕೇಳಿಬರಲಿದೆ. ಇದು ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ನಿರ್ಮಿಸಬಹುದು.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಯಾವುದೇ ರೀತಿಯ ಹೂಡಿಕೆಯ ಬಗ್ಗೆ ಜಾಗರೂಕರಾಗಿರಿ. ಬುದ್ದಿವಂತಿಕೆಯಿಂದ ಕೆಲಸ ಮಾಡಿದರೆ ಲಾಭ ಪಡೆಯಬಹುದು. ಕಲಾ ಕ್ಷೇತ್ರದಲ್ಲಿ ಇರುವವರಿಗೆ ಇಂದು ಭಾರೀ ಅದೃಷ್ಟದ ದಿನ. ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಲು ಪೂರ್ವಸಿದ್ಧತೆ ಅಗತ್ಯವಾಗಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಉದ್ಯೋಗ ಸಂಬಂಧಿತ ಸಂವಹನ ಮತ್ತು ಚರ್ಚೆಗಳನ್ನು ಹೆಚ್ಚಿಸಿ. ಸ್ಪರ್ಧೆಯಲ್ಲಿ ಗೆಲುವು ಸಾಧಿಸಲು ನಿಮ್ಮ ಗಮನ ಕೇಂದ್ರೀಕರಿಸಿ. ನಿರ್ವಹಣೆ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡಿ. ಹಣಕಾಸಿನ ವಿಷಯದಲ್ಲಿ ಪ್ರಭಾವಿ ವ್ಯಕ್ತಿಯಿಂದ ಭಾರೀ ಲಾಭವಾಗಬಹುದು.
ಧನು ರಾಶಿಯವರ ಭವಿಷ್ಯ (Sagittarius Horoscope):
ಹಣಕಾಸು ವಿಚಾರದಲ್ಲಿ ನಿರ್ವಹಣೆಯತ್ತ ಸೂಕ್ತ ಗಮನಹರಿಸಿ. ಪ್ರಮುಖ ಪ್ರಸ್ತಾಪಗಳನ್ನು ಹಿರಿಯರ ಮುಂದಿಡಲು ಇಂದಿನ ದಿನ ತುಂಬಾ ಪ್ರಾಶಸ್ತ್ಯವಾಗಿದೆ. ಆದಾಯದ ಮೂಲಗಳು ಹೆಚ್ಚಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ವೇಗ ಪಡೆಯಲಿವೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮ ಪಾಲಿಗಿದೆ. ವ್ಯವಹಾರದಲ್ಲಿ ತ್ವರಿತ ಲಾಭಕ್ಕೆ ಆಸೆ ಪಡೆದೆ ಭವಿಷ್ಯದ ದೃಷ್ಟಿಯಿಂದ ಯೋಜನೆಗಳನ್ನು ರೂಪಿಸಿ. ನಿಮಗೆ ಸಿಗುವ ಅವಕಾಶಗಳನ್ನೇ ಬಂಡವಾಳ ಮಾಡಿಕೊಳ್ಳಿ. ನಿರೀಕ್ಷಿತ ಫಲಿತಾಂಶ ಪಡೆಯಲು ಹೆಚ್ಚು ಸಮಯ ಬೇಕಾಗುವುದಿಲ್ಲ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಈ ದಿನ ಅದೃಷ್ಟ ನಿಮ್ಮ ಬೆಂಬಲಕ್ಕಿದೆ. ಆದರೂ, ಕೆಲವು ವಿಚಾರಗಳಲ್ಲಿ ತಾಳ್ಮೆಯಿಂದ ವರ್ತಿಸಿ. ವ್ಯವಸ್ಥಿತ ವಿಷಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಕೆಲಸ ಮತ್ತು ವ್ಯಾಪಾರ ವಿಚಾರಗಳು ಸುಗಮವಾಗಿ ಸಾಗಳಿವೆ. ಹಿರಿಯರೊಂದಿಗೆ ಸಭೆಯು ಫಲಪ್ರದವಾಗಿರಲಿದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ದೀರ್ಘಾವಧಿಯ ಯೋಜನೆಗಳು ಪ್ರವರ್ಧಮಾನಕ್ಕೆ ಬರಲಿವೆ. ಕೆಲಸದಲ್ಲಿ ಪ್ರಯತ್ನಗಳನ್ನು ವೇಗಗೊಳಿಸಿರುವುದರಿಂದ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ಗುರಿ ಆಧಾರಿತ ಸಿದ್ಧತೆಗಳನ್ನು ಹೆಚ್ಚಿಸಿ. ಅನಾವಶ್ಯಕ ವಾದ-ವಿವಾದಗಳಲ್ಲಿ ಸಿಲುಕದಿರಿ.
