ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಹರ್ಷಣ, ಕರಣ:ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 14 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:01 ರಿಂದ 03:26ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:59 ರಿಂದ 08:24 ರವರೆಗೆ, ಗುಳಿಕ ಕಾಲ 09:48 ರಿಂದ 11:12 ರವರೆಗೆ.
ಮೇಷ ರಾಶಿ: ಭವಿಷ್ಯದ ಬಗ್ಗೆ ಇರುವ ಇಂಗಿತವನ್ನು ಹೇಳಿಕೊಳ್ಳಬಾರದು. ನಿಮ್ಮ ಹೆಚ್ಚುಗಾರಿಕೆಯನ್ನು ಸಹಿಸಿಕೊಳ್ಳಲಾಗದು. ಮಕ್ಕಳ ವರ್ತನೆಗಳು ನಿಮಗೆ ಕಷ್ಟಕೊಡಬಹುದು. ಸ್ನೇಹಸಂಬಂಧ ಗಟ್ಟಿಮಾಡಿಕೊಳ್ಳಲು ಇಷ್ಟವಾಗುವುದು. ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭವಾಗುವುದು. ಇಂದಿನ ನಿಮ್ಮ ಅಜಾಗರೂಕತೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಅನಿವಾರ್ಯ ಕಾರಣದಿಂದ ನೀವು ಅಧಿಕಾರವನ್ನು ವಹಿಸಿಕೊಳ್ಳಬೇಕಾಗಬಹುದು. ದುಃಸ್ವಪ್ನದಿಂದ ಭಯಗೊಳ್ಳುವಿರಿ. ಮೊದಲೇ ಸಮಯವನ್ನು ಸರಿಯಾಗಿ ನಿರ್ಧರಿಸಿಕೊಂಡು ಕಾರ್ಯವನ್ನು ಆರಂಭಿಸಿದರೆ ಸಕಾಲಕ್ಕೆ ಮುಗಿಯುವುದು. ಆಸಕ್ತಿಯು ಇಲ್ಲದಿದ್ದರೂ ಒತ್ತಾಯಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ನಿಮಗೆ ಧೈರ್ಯ ತಂದುಕೊಡುವುದು. ಪ್ರೀತಿಯಲ್ಲಿ ನಿಮಗೆ ಸೋಲಾಗಬಹುದು. ಮನೋರಂಜನೆಯಿಂದ ಒತ್ತಡ ಕಡಿಮೆಯಗುವುದು.
ವೃಷಭ ರಾಶಿ: ಸಂಗಾತಿ ನಿಮ್ಮ ದಿಕ್ಕನ್ನು ತಪ್ಪಿಸಬಹುದು. ನಿಮ್ಮ ಗುರಿಯ ದಿಕ್ಕನ್ನು ತಪ್ಪಿಸಬಹುದು. ನಿಮ್ಮವರ ಪಾಲಿಗೆ ನೀವು ಯಃಕಶ್ಚಿತ್ ನಂತೆ ತೋರುವಿರಿ. ಮನೆಯ ದುರಸ್ತಿಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವಿರಿ. ಬಹಳ ಶ್ರಮದಿಂದ ಭೂಮಿಯ ಮಾರಟವನ್ನು ಮಾಡುವಿರಿ. ವೃತ್ತಿಯಿಂದ ನೀವು ವಿದೇಶ ಪ್ರಯಾಣವನ್ನು ಮಾಡಬೇಕಾಗಬಹುದು. ಬಂಧುಗಳು ನಿಮ್ಮ ಬಳಿ ಬಂದು ನೋವನ್ನು ಹೇಳಿಕೊಳ್ಳುವರು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲು ಮನೆಯಿಂದ ಒಪ್ಪಿಗೆಯನ್ನು ನಿರಾಕರಿಸಬಹುದು. ಇಂದು ನೀವು ಕೋಪವನ್ನು ಮಾಡಿಕೊಳ್ಳಲು ಕಾರಣವೇ ಬೇಕಾಗದು. ನೌಕರರಿಂದ ನಿಮಗೆ ಸರಿಯಾದ ಪ್ರತಿಕ್ರಿಯೆ ಸಿಗದು. ವಿವೇಚನೆ ಇಲ್ಲದೇ ಆಡಿದ ನಿಮ್ಮ ಮಾತುಗಳಿಂದ ಕಲಹವಾಗಬಹುದು. ನಿಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶಗಳು ಸಿಗುವುದು. ಎಲ್ಲ ಸಂದರ್ಭಗಳೂ ಆಸ್ವಾದನೀಯವಾಗಿ ಇರುವಂತೆ ಮಾಡುವಿರಿ. ಇಂದು ನೀವು ಮಕ್ಕಳಲ್ಲಿ ಸ್ಪರ್ಧೆಯ ಮನೋಭಾವವನ್ನು ಹೆಚ್ಚಿಸುವಿರಿ.
ಮಿಥುನ ರಾಶಿ; ಸರಳತೆಯಲ್ಲಿ ಸುಖವನ್ನು ಕಾಣುವುದು ಗೊತ್ತು. ಅನ್ಯರ ವಸ್ತುವನ್ನು ಕೇಳಿ ಪಡೆಯಿರಿ. ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಉತ್ತಮ ವಿಶ್ವಾಸಿಗಳನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಜೊತೆ ಬಹಳ ಸಂಯೋಷದ ಕ್ಷಣವನ್ನು ಕಳೆಯುವಿರಿ. ಉದ್ಯೋಗದ ಸ್ಥಳದಲ್ಲಿ ಉಂಟಾದ ಪಕ್ಷಪಾತದಿಂದ ದ್ವೇಷಭಾವವು ಉಂಟಾಗಬಹುದು. ಕಲಾವಿದರು ಅವಕಾಶವನ್ನು ಹುಡುಕಿಕೊಂಡು ಹೋಗಬೇಕಾಗಬಹುದು. ಸಾಲದ ವಿಚಾರವಾಗಿ ಕುಟುಂಬದ ಜೊತೆ ಬಿಸಿ ಚರ್ಚೆಯಾಗಬಹುದು. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ಸಮಾಧಾನ ಇರದು. ಹಲವು ದಿನಗಳಿಂದ ಉಳಿಸಿಕೊಂಡ ವೈಯಕ್ತಿಕ ಕೆಲಸವೇ ಉಳಿಯಲಿದೆ. ಶತ್ರುಗಳು ನಿಮ್ಮ ಸ್ಥಿತಿಯನ್ನು ಕಂಡು ಸಂತೋಷಪಡಬಹುದು. ಯೋಜನೆಯನ್ನು ಯಾರಿಗೂ ಹೇಳದೇ ನಿಮ್ಮಷ್ಟಕ್ಕೇ ಮಾಡಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕವಾಗಿ ಬರುವ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ.
ಕರ್ಕಾಟಕ ರಾಶಿ; ಕೇಳಿ ಬಂದವರಿಗೆ ನಿಮ್ಮಲ್ಲಿರುವುದನ್ನೇ ಕೊಡುವಿರಿ. ಅವಶ್ಯಕ ವಸ್ತುಗಳನ್ನು ಜಾಗರೂಕರಾಗಿ ಖರೀದಿ ಮಾಡಿ. ಸಂಸಾರದ ಸೂಕ್ಷ್ಮತೆಗಳು ನಿಮಗೆ ಅರ್ಥವಾಗದು. ಹೂಡಿಕೆಯಿಂದ ಸ್ವಲ್ಪ ನಷ್ಟವಾದಂತೆ ಕಾಣಬಹುದು. ಕಛೇರಿಯಲ್ಲಿ ಯಾರದೋ ತಪ್ಪಿಗೆ ನೀವು ತಲೆ ತಗ್ಗಿಸಬೇಕಾಗಬಹುದು. ಪ್ರಾಣಿಗಳ ಮೇಲೆ ಪ್ರೀತಿ ತೋರಿಸುವಿರಿ. ನಿಮ್ಮ ಕಾರ್ಯದಲ್ಲಿ ನಿಮಗೆ ತಪ್ಪು ಕಾಣಿಸುವುದು. ಹೊಗಳಿಕೆಯಿಂದ ನಿಮಗೆ ಸಂಕೋಚ ಉಂಟಾಗಬಹುದು. ನಿಮ್ಮ ಬಯಕೆಗಳಿಗೆ ಇನ್ಮೊಬ್ಬರು ಪ್ರೇರಣೆ ಆಗಬಹುದು. ಪ್ರೀತಿಯ ಕಾರಣಕ್ಕೆ ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಿಸುವುದು ಕಷ್ಟವಾದೀತು. ಬಹಳ ಕಾಲದಿಂದ ಮುಗಿಯದ ಕೆಲಸವನ್ನು ಇಂದು ಒಂದು ಹಂತಕ್ಕೆ ತರುವಿರಿ. ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನು ಕೊಡಬಹುದು. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ಒಳ ಮನಸ್ಸು ಹೇಳುವುದನ್ನು ಕೇಳಿಸಿಕೊಂಡರೆ ಒಳ್ಳೆಯದು.
ಸಿಂಹ ರಾಶಿ: ಪರರ ನೋವನ್ನು ನುಂಗಲು ಸಾಧ್ಯವಾದರೆ ಉಪದೇಶ ಮಾಡಿ. ಇಂದು ನಗುವವರೆದುರು ಎಡವಿದಂತೆ ಆಗುವುದು. ಮನೆಯ ತುರ್ತು ಕಾರ್ಯಗಳನ್ನು ಮಾಡಲು ಆಗದು. ಅನಿವಾರ್ಯವಿದ್ದರೂ ಧನವ್ಯಯದ ಕಾರಣ ಖರೀದಿಯನ್ನು ಮುಂದೂಡುವಿರಿ. ಸಾಮಾಜಿಕ ಗೌರವವನ್ನು ಪಡೆಯಲು ಆಸೆ ಇರುವುದು. ತಾಯಿಯ ಪ್ರೀತಿಯಿಂದ ವಂಚಿತರಾಗಬಹುದು. ವಾಹನದಿಂದ ನಿಮಗೆ ಆದಾಯ ಸಿಗುವುದು. ಉದ್ಯೋಗದ ಕಾರಣಕ್ಕೆ ದೂರದ ಊರಿಗೆ ಹೋಗಬೇಕಾಗಬಹುದು. ಪ್ರಯಾಣದ ಮುಂಜಾಗ್ರತೆಯ ಕ್ರಮವಿರಲಿ. ಗೊತ್ತಿಲ್ಲದ ಪ್ರದೇಶಕ್ಕೆ ಒಂಟಿಯಾಗಿ ಹೋಗಬೇಕಾಗಬಹುದು. ಹೊಸ ಉದ್ಯಮವನ್ನು ಮಾಡಲು ಆಪ್ತರ ಅಥವಾ ಅನುಭವಿಗಳ ಸಲಹೆ ಬೇಕಾದೀತು. ದಾಂಪತ್ಯದಲ್ಲಿನ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ. ಮಕ್ಕಳಿಲ್ಲದೇ ಬೇಸರವಾಗಲಿದೆ. ಏಕಾಂಗಿಯಾಗಿ ಇರುವುದು ಕಷ್ಟವಾಗುವುದು. ಅಚಾನಕ್ ತಿರುಗಾಟ ಮಾಡಬೇಕಾಗುವುದು.
ಕನ್ಯಾ ರಾಶಿ: ನಿಮ್ಮ ನಿಗೂಢತೆಯನ್ನು ಅರ್ಥಮಾಡಿಕೊಳ್ಳಲಾಗದು. ನಿಮ್ಮದಾದ ಜಾಗವನ್ನು ಪಡೆಯಲು ಬೇರೆ ರೀತಿಯಲ್ಲಿ ಪ್ರಯತ್ನಿಸುವಿರಿ. ನಿಮ್ಮ ಅಂದುಕೊಂಡ ಕಾರ್ಯವು ವೇಗವನ್ನು ಪಡೆಯದೇ ಇರಲು ಹಿತಶತ್ರುಗಳೇ ಕಾರಣವಾಗುವರು. ಮೃದುಸ್ವಭಾವದಿಂದ ಉಪಯೋಗವಾಗದು. ನಿಮ್ಮನ್ನು ಎದುರಿಗೆ ಮಾತ್ರ ಹೊಗಳುವರು. ಅಜಾಗರೂಕತೆಯಿಂದ ಬಿದ್ದು ಗಾಯ ಮಾಡಿಕೊಳ್ಳಬಹುದು. ಕೈಗೊಂಡ ಕಾರ್ಯಗಳಲ್ಲಿ ಪೂರ್ಣ ಜಯವು ಪ್ರಾಪ್ತವಾಗುವುದು. ಪ್ರಾಮಾಣಿಕತೆಗೆ ಸಿಕ್ಕ ಪ್ರಶಂಸೆಯಿಂದ ಇನ್ನಷ್ಟು ಉತ್ಸಾಹ ಇರುವುದು. ಯಾರದೋ ಕಾರ್ಯಕ್ಕೆ ನೀವು ದಂಡಿಸಿ ಕೆಲಸ ಮಾಡಬೇಕಾದೀತು. ಆರ್ಥಿಕತೆಯನ್ನು ಬಲಗೊಳಿಸಲು ಅನ್ಯ ಉದ್ಯೋಗವನ್ನು ಮಾಡಬೇಕಾಗಬಹುದು. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿರಲಿದೆ. ಹಠದ ಸ್ವಭಾವದಿಂದ ಸುಲಭವಾಗಿ ಸಿಗುವುದನ್ನು ಕಳೆದುಕೊಳ್ಳುವಿರಿ. ವ್ಯಾಪಾರದ ನಷ್ಟವನ್ನು ಹೇಗಾದರೂ ತೂಗಿಸಿಕೊಳ್ಳುವಿರಿ. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು.
ತುಲಾ ರಾಶಿ: ಅಸಭ್ಯರ ಜೊತೆ ಅವರಂತೆಯೇ ವರ್ತಿಸುವಿರಿ. ಇದರಿಂದ ಅವರ ಮನಸ್ಸಿಗೂ ನೆಮ್ಮದಿ. ನಿಮ್ಮ ಮಾತನಂತೆ ನಡೆಯುತ್ತಿಲ್ಲ ಎಂಬ ಬೇಸರ ಇರುವುದು. ಪೂರ್ವಾಪರ ಯೋಚನೆ ಇಲ್ಲದೇ ಒಂದು ಕೆಟ್ಟ ನಿರ್ಧಾರವನ್ನು ತೆಗೆಸುಕೊಳ್ಳುವಿರಿ. ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳಬಹುದು. ನಿಮಗೆ ಇಷ್ಟವಾಗದ ಕಾರ್ಯವನ್ನು ಮಾಡಬೇಕಾಗಬಹುದು. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಅಧಿಕ ಶ್ರಮಿಸುವಿರಿ. ವಾತದೋಷದಿಂದ ನಿಮಗೆ ಕಷ್ಟವಾಗುವುದು. ನಿಮಗೆ ಕೊಟ್ಟ ಜವಾಬ್ದಾರಿಯು ಹಸ್ತಾಂತರ ಆಗಬಹುದು. ಮಕ್ಕಳಿಂದ ನಿಮಗೆ ಪ್ರೀತಿಯಿಂದ ಉಡುಗೊರೆ ಕೊಡುವರು. ಅಧ್ಯಾತ್ಮದಲ್ಲಿ ಮನಸ್ಸು ಹೆಚ್ಚಿರುವುದು. ವಿವಾಹವನ್ನು ತಿರಸ್ಕರಿಸುವಿರಿ. ನಿಮ್ಮನ್ನು ಚುಚ್ಚುವ ಹಾಗೆ ನಿಮ್ಮವರು ಮಾತನಾಡುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳುವಿರಿ. ಅಮೂಲ್ಯ ವಸ್ತುಗಳ ಸಂಪಾದನೆ ನಿಮ್ಮ ಕನಸಾಗಲಿದೆ.
ವೃಶ್ಚಿಕ ರಾಶಿ: ಎಂದೋ ಮಾಡಿದ ಸುಕೃತವು ನಿಮ್ಮನ್ನು ಅಪಾಯದಿಂದ ರಕ್ಷಿಸುವುದು. ನಿಮಗೆ ಇಂದು ಅಶಕ್ತರ ಬಗ್ಗೆ ಕರುಣೆ ಹೆಚತವುವುದು. ಅಪರಿಚಿತರ ಜೊತೆ ಸಲುಗೆ ಬೆಳೆಯಬಹುದು. ಯಾರ ಬಗ್ಗೆಯೂ ಹಗುರಾದ ಮಾತುಗಳನ್ನು ಆಡುವುದು ಬೇಡ. ನಿಮ್ಮದಲ್ಲದ ವಸ್ತುವನ್ನು ಬಳಸಿಕೊಂಡು ಹಾಳು ಮಾಡುವಿರಿ. ಹಳೆಯ ಪ್ರೇಮವು ಬೆಳಕಿಗೆ ಬಂದು ಮುಜುಗರ ಉಂಟಾದೀತು. ಉದ್ಯೋಗದಲ್ಲಿ ಒತ್ತಡ ಸ್ವೀಕರಿಸುವುದು ಅಭ್ಯಾಸವಾಗಿ ಹೋಗುವುದು. ಯಾವುದೇ ಪ್ರಭಾವಕ್ಕೆ ಸಿಕ್ಕಿ ನಿಮ್ಮನ್ನು ಬದಲಿಸಿಕೊಳ್ಳಬೇಕಾಗಬಹುದು. ನಿಮ್ಮ ಮಾನಸಿಕ ಅಸಮಾಧಾನಕ್ಕೆ ದೈವದ ಮೊರೆ ಹೋಗುವುದು ಒಳಿತು. ಆಸ್ತಿಯನ್ನು ಉಳಿಸಿಕೊಳ್ಳುವುದೇ ತಲೆನೋವಾಗಬಹುದು. ಮನೆಯಿಂದ ದೂರವಿದ್ದವರು ಹತ್ತಿರವಾಗಬೇಕು ಎನಿಸಬಹುದು. ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು. ಯಾರನ್ನೋ ಹಿಮ್ಮೆಟ್ಟಿಸುವ ಆಸ್ತೆಯಿಂದ ಕೆಲಸ ಮಾಡುವಿರಿ.
ಧನು ರಾಶಿ: ಬಾಯನ್ನು ಕಟ್ಟುವುದು ನಿಮಗೆ ಆಗದು. ಏನನ್ನಾದರೂ ಹೇಳುತ್ತಲೇ ಇರುವಿರಿ. ಕೋಪವು ದೀರ್ಘಕಾಲದ ವರೆಗೆ ಇರುವುದು. ವೃತ್ತಿಯಲ್ಲಿ ನೀವು ತುಂಬಾ ನಿಧಾನದಿಂದ ಕೆಲಸ ಮಾಡುವಿರಿ. ದೂರ ಬಂಧುಗಳ ಭೇಟಿಯಿಂದ ವಿವಾಹ ನಿಶ್ಚಯವಾಗಬಹುದುದು. ಪ್ರೇಮವು ಹೊಸ ತಿರುವನ್ನು ಪಡೆಯಬಹುದು. ಮನಸ್ಸು ಕೆಡಿಸಿಕೊಂಡು ಏನೂ ಮಾಡಲಾಗದು. ಶಾಂತವಾಗಿ, ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ವಸ್ತುಗಳನ್ನು ಕಳೆದುಹೋಗಿದ್ದು ವಿಳಂಬವಾಗಿ ಬೆಳಕಿಗೆ ಬಂದೀತು. ಹಿರಿಯ ಮಾತನ್ನು ಅಸಡ್ಡೆ ಮಾಡುವಿರಿ. ನಿಮ್ಮ ನಿರ್ಧಾರವು ಸರಿಯಾಗಿದೆಯೇ ಎಂದು ಅವಲೋಕನ ಮಾಡಿಕೊಳ್ಳಿ. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹರಿಸಿ. ಭವಿಷ್ಯದ ಅನೇಕ ದ್ವಂದ್ವಗಳು ಇರಬಹುದು. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು.
ಮಕರ ರಾಶಿ; ಬಂಧುಗಳಿಂದ ನಿಮಗೆ ಹಣಕಾಸಿನಲ್ಲಿ ವಂಚನೆ ಆಗಬಹುಸು. ಕಛೇರಿಯಲ್ಲಿ ನಿಮಗೆ ತಪ್ಪಿತಸ್ಥ ಭಾವವು ಬರಬಹುದು. ಸರ್ಕಾರಿ ಕೆಲಸಕ್ಕಾಗಿ ಹಣವನ್ನು ಕೊಡುವಿರಿ. ಯಾರಿಗೂ ಎತ್ತರದ ದನಿಯನ್ನು ಮಾಡುವುದು ಬೇಡ. ನಿಮ್ಮ ಬಗ್ಗೆ ತಪ್ಪು ಕಲ್ಪನೆಯು ಬರಬಹುದು. ಅನಾರೋಗ್ಯವನ್ನು ಬಹಳವಾಗಿ ನಿರ್ಲಕ್ಷಿಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಆದರೂ ಮಾತಿಗೆ ತಪ್ಪಲಾರಿರಿ. ಹಣದಲ್ಲಿ ಮೋಸವಾಗಬಹುದು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನಿಮಗೆ ನಾನಾ ಕಾರಣಗಳಿಂದ ಬೇಡವೆನಿಸುವುದು. ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾಗುವುದು. ಪ್ರಾಮಾಣಿಕತೆಯಿಂದ ನಿಮಗೇ ಕಷ್ಟವಾಗುವುದು. ಶತ್ರುಗಳನ್ನು ಸೋಲಿಸುವುದಕ್ಕಿಂತ ಶತ್ರುಗಳೇ ಇಲ್ಲದಂತೆ ಮಾಡಿಕೊಳ್ಳುವಿರಿ.
ಕುಂಭ ರಾಶಿ: ಇಂದು ಹಣ ಗಳಿಕೆಯ ಬಗ್ಗೆ ವಿಶೇಷ ಆಸಕ್ತಿ ಬರಲಿದೆ. ನಿಮ್ಮ ಯೋಜನೆಯು ಸಾಕಾರವಾಗದೇ ಇರುವುದು ನಿಮಗೆ ಕಷ್ಟವಾಗಬಹುದು. ಬೇಸರವನ್ನು ಯಾರ ಬಳಿಯಾದರೂ ಹೇಳಿಕೊಳ್ಳಬೇಕೆನಿಸದು. ಏನನ್ನಾದರೂ ಬಳಸುವ ಮೊದಲು ಪರೀಕ್ಷಿಸಿಕೊಳ್ಳಿ. ಮಕ್ಕಳಲ್ಲಿ ಬದಲಾವಣೆಯನ್ನು ನೀವು ಕಾಣಬಹುದು. ಮೃದುವಾದ ಮಾತನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕಾದೀತು. ನಿಮ್ಮ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಅಸ್ಥಿರತೆಯು ನಮಗೆ ಗೊಂದಲವನ್ನು ಸೃಷ್ಟಿಸುವುದು. ಕೆಲವು ಸಂಬಂಧಗಳು ಮತ್ತಷ್ಟು ಹತ್ತಿರವಾಗಬಹುದು. ಕುಲಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಿದ್ದಕ್ಕೆ ಪ್ರಶಂಸೆಯು ಸಿಗುವುದು. ವಿದ್ಯಾಭ್ಯಾಸಕ್ಕೆ ಪ್ರೇರಣೆ ಸಿಗಬಹುದು. ಆಪ್ತರೆಂದು ಮಾತಿನಲ್ಲಿ ಹಿಡಿತವಿಲ್ಲದೇ ಏನನ್ನಾದರೂ ಹೇಳುವಿರಿ.
ಮೀನ ರಾಶಿ: ಇಂದು ಬಂಧುಗಳ ಸಮಾಗಮದಿಂದ ಮನೆಯಲ್ಲಿ ಬಹಳ ದಿನಗಳ ಅನಂತರ ಸಂತೋಷ. ತಾಯಿ ಮಾತಿನಿಂದ ನಿಮಗೆ ವಿದ್ಯಾಭ್ಯಾಸಕ್ಕೆ ಹೊಸ ಸ್ಪೂರ್ತಿಯು ಸಿಗಬಹುದು. ಸಹೋದರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಸಾಮಾಜಿಕ ಕೆಲಸದಲ್ಲಿ ಇರುವಷ್ಟು ಶ್ರದ್ಧೆ ಮನೆಯ ಕೆಲಸದಲ್ಲಿ ಬರದೇ ಇರಬಹುದು. ಕೆಲವನ್ನು ಮರೆತು ಮುಂದೆ ಸಾಗುವುದು ನಿಮಗೆ ಉತ್ತಮ. ನಿಮ್ಮ ಬಳಿಯ ಹಣವನ್ನು ಕೇಳಿಕೊಂಡು ಬರಬಹುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸಿ ಸಂತೋಷಿಸುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇದೆ. ಕೆಲವರ ನಂಬಿಕಗೆ ಘಾಸಿಯನ್ನು ಉಂಟುಮಾಡುವಿರಿ. ಗೃಹ ಬಳಕೆಯ ವಸ್ತುಗಳು ಹೆಚ್ಚು ಮಾರಾಟವಾಗುವುವು. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ. ಖುಷಿಯಿಂದ ಸ್ವೀಕರಿಸಿ ಎಲ್ಲವನ್ನೂ.