
ಉತ್ತರ ಕನ್ನಡ: ಭಾರತವನ್ನು ಚಾಂಪಿಯನ್ ಮಾಡಿದ ಕುಮಟಾದ ಯುವಕ! ಹೌದು ಇದು ನಿಜ, ಭಾರತ ವಾಲಿಬಾಲ್‌ನಲ್ಲಿ ವಿಶ್ವ ಚಾಂಪಿಯನ್ ಆಗಿದೆ. ಆ ಭಾರತ ತಂಡವನ್ನು ಪ್ರತಿನಿಧಿಸಿದ ಆಟಗಾರರಲ್ಲಿ ಕುಮಟಾದ ಯತೀಶ್ ನಾಯ್ಕ್ ಕೂಡ ಒಬ್ಬರು!
ಸತೀಶ್ ನಾಯ್ಕ್ ಹಳ್ಳಿ ಪ್ರತಿಭೆ!
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಯುವಕ ಯತೀಶ್ ನಾಯ್ಕ್ ಅವರು ಬಾಳಿಗಾ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಬಾಲ್ಯದಿಂದಲೇ ವಾಲಿಬಾಲ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಈತ, ಕೇವಲ ತನ್ನ ಊರಿನಲ್ಲಿಯೇ ಪ್ರಾಕ್ಟೀಸ್ ಮಾಡಿಕೊಂಡು ಈ ಹಂತಕ್ಕೆ ಏರಿದ್ದು ಅಚ್ಚರಿಯೇ ಸರಿ! ಕುಮಟಾದ ಹೊಲನಗದ್ದೆ ಎಂಬ ಸಣ್ಣ ಊರು. ಈ ಊರಿನ ಪ್ರತಿಭೆ ಈಗ ಕ್ರೀಡೆಯಲ್ಲಿ ಈ ಮಟ್ಟಿಗಿನ ಸಾಧನೆ ತೋರಿದ್ದು ಅವರ ಶ್ರಮ ಹಾಗೂ ಶಕ್ತಿಯ ಧ್ಯೋತಕವಾಗಿದೆ.

ನೇಪಾಳದಲ್ಲಿ ನಡೆದ ಟೂರ್ನಮೆಂಟ್
ಯತೀಶ್ ಗಿರೀಶ್ ನಾಯ್ಕ ಹೊಲನಗದ್ದೆ 2023-24ನೇ ಸಾಲಿನಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅಂತರಾಷ್ಟ್ರೀಯ ಹಂತಕ್ಕೆ ಆಯ್ಕೆಯಾದರು. ನವೆಂಬರ್ 29, 2024ರಿಂದ ಡಿಸೆಂಬರ್ 1, 2024ರವರೆಗೆ ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದರು ಹಾಗೂ ಡಿಸೆಂಬರ್ 30, 2024ರಿಂದ ಜನವರಿ 2, 2025ರವರೆಗೆ ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಾಂಪಿಯನ್ ಶಿಪ್‌ನ್ನು ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ.
ಟೂರ್ನಿಯಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾವನ್ನು ಮಣಿಸಿ ಭಾರತ ತಂಡ ವಿಶ್ವ ವಿಜೇತನಾಗಿದ್ದು, ಈ ಕ್ರೀಡಾಕೂಟದಲ್ಲಿ ಯತೀಶ್ ನಾಯ್ಕ್ ಯಶಸ್ವಿಯಾಗಿದ್ದಾರೆ.