ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಅಷ್ಟಮಿ, ನಿತ್ಯನಕ್ಷತ್ರ: ಹಸ್ತಾ, ಯೋಗ: ಸೌಭಾಗ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 55 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 08 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:19 ರಿಂದ 09:44ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:08 ರಿಂದ ಮಧ್ಯಾಹ್ನ 12:32 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 01:56 ರಿಂದ 03:20 ರವರೆಗೆ.
ಮೇಷ ರಾಶಿ: ನಿರೀಕ್ಷಿತ ಸ್ಥಾನದತ್ತ ನೀವು ಏರುವಿರಿ. ಪ್ರಭಾವೀ ವ್ಯಕ್ತಿಗಳ ಪರಿಣಾಮವು ನಿಮ್ಮ ಮೇಲೆ ಗಾಢವಾಗುವುದು. ಬರಬೇಕಾದ ಹಣವನ್ನು ನೀವು ಪಡೆದುಕೊಳ್ಳುವಿರಿ. ನಿಮ್ಮನ್ನು ಅಪಹಾಸ್ಯ ಮಾಡುವವರಿಗೆ ಪ್ರತ್ಯುತ್ತರ ನೀಡುವಿರಿ. ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚಿನ ಓಡಾಟವಾಗಬಹುದು. ಬರಬೇಕಾದ ಹಣವನ್ನು ನೀವು ಬಹಳ ಶ್ರಮದಿಂದ ಪಡೆಯಬೇಕಾಗಬಹುದು. ನಿಮ್ಮ ಇಂದಿನ ಕೆಲಸಗಳು ಅಡೆತಡೆಯ ನಡೆವೆಯೂ ಮಾಡಿಕೊಳ್ಳುವಿರಿ. ಪರರ ವಸ್ತುವನ್ನು ಬಳಸಿ, ಹಿಂದಿರುಗಿಸಿ. ವಾಹನ ಖರೀದಿಗೆ ಹಣವನ್ನು ಹೊಂದಿಸುವುದು ಸವಾಲಾಗಬಹುದು. ಅಪಘಾತ ಭೀತಿಯು ಕಾಡುವುದು. ಕೆಲವು ಭಾವ ಭಿತ್ತಿಯನ್ನು ಒಡೆದರೆ ಮಾರ್ಗ ಸುಲಭ. ನಿಮಗೆ ಸಂಬಂಧವಿಲ್ಲದೇ ಇರುವ ವಿಚಾರಕ್ಕೆ ಮಧ್ಯ ಪ್ರವೇಶ ಬೇಡ. ನಿಮ್ಮ ಬುದ್ಧಿಯು ನಕಾರಾತ್ಮಕ ವಿಚಾರವನ್ನೇ ಯೋಚಿಸುವುದು. ಬಂಧುಗಳ ಜೊತೆ ದೂರ ಪ್ರಯಾಣ ಮಾಡುವಿರಿ.
ವೃಷಭ ರಾಶಿ: ನಿಮ್ಮ ಉತ್ಸಾಹ ಕ್ಷಣಾರ್ಧದಲ್ಲಿ ಇಳಿದುಹೋಗಬಹುದು. ಸತ್ಯದ ನಡುವೆ ಇರುವ ಸುಳ್ಳಿಗೆ ಸತ್ಯದಷ್ಟೇ ಬೆಲೆ. ಅದನ್ನೇ ಮುಂದುವರಿಸಿದರೆ ನಿಮಗೂ ಬೆಲೆ ಇರದು. ಸಮಯದ ಹೊಂದಾಣಿಕೆಯಿಂದ ಕಾರ್ಯವನ್ನು ಸಾಧಿಸಬಹುದು. ನಿಮ್ಮ ಒರಟಾದ ಮಾತು ಇನ್ನೊಬ್ಬರಿಗೆ ಬೇಸರವನ್ನು ಕೊಡುವುದು. ವಸ್ತುಗಳ ಖರೀದಿಗೆ ಹಣವನ್ನು ಖರ್ಚು ಮಾಡಬಹುದು. ಪರೀಕ್ಷಿಸಿ ಖರೀದಿಸಿ. ವಿರೋಧಿಗಳು ಊಹಿಸಿದಂತೆ ನಿಮ್ಮ ಆಲೋಚನೆ ಇರುವುದು. ಏಕಾಂತದಲ್ಲಿ ಇರುವುದು ನಿಮಗೆ ಇಷ್ಟವಾಗುವುದು. ಸಹೋದರಿಯ ನಡುವೆ ವಾಗ್ವಾದ ಮಾಡುವಿರಿ. ಆಸ್ತಿಯ ವಿಚಾರದಲ್ಲಿ ಬೇಸರವಿರಲಿದೆ. ಒತ್ತಾಯಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡುವಿರಿ. ಆತ್ಮಪ್ರಶಂಸೆಯಿಂದ ಸೋಲಾಗುವುದು. ನಿಮ್ಮ ಬಗ್ಗೆ ಹಿಂದಿನಿಂದ ಮಾತನಾಡಿಕೊಳ್ಳುವುದು ಗೊತ್ತಾದೀತು. ಕೆಲವು ತಿರುವಿನಲ್ಲಿ ನೇರವಾಗಿ ಹೋಗಲಾಗದು.
ಮಿಥುನ ರಾಶಿ: ಸುಮ್ಮನೆ ಇದ್ದರೂ ನಿಮ್ಮನ್ನು ಕೆಣಕಬಹುದು. ನಿಮ್ಮ ಬಲವನ್ನು ಯಾರದೋ ಮೂಲಕ ಕಂಡುಕೊಳ್ಳುವ ಬದಲು, ನೀವೇ ಅರಿತುಕೊಂಡರೆ ಸುಖ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಅಲಂಕಾರಿಕ ವಸ್ತುಗಳ ಖರೀದಿಯಿಂದ ಲಾಭವಾಗಲಿದೆ. ಹಲವು ಪ್ರಯತ್ನದ ಬಳಿಕ ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳುವಿರಿ. ನಿರೀಕ್ಷಿತ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರವು ಸಿಗಬಹುದು. ನಿಮ್ಮ ವಿದ್ಯಾಭ್ಯಾಸವನ್ನು ಕಂಡು ಆಚ್ವರಿಯಾಗಬಹುದು. ದೇವತಾರಾಧನೆಗೆ ತಿಳಿದವರ ಜೊತೆ ಚರ್ಚಿಸುವುದು ಸೂಕ್ತ. ಹಣದ ದುಂದುವೆಚ್ಚಕ್ಕೆ ಕಡಿವಾಣ ಬೇಕು. ಪ್ರಯೋಜನವಿಲ್ಲದ ಮಾತುಕತೆಯಲ್ಲಿ ದಿನವನ್ನು ಕಳಯುವಿರಿ. ನಿಮ್ಮದೇ ವಸ್ತುವಾದರೂ ನಿಮಗೆ ಬೇಕಾದ ಸಮಯಕ್ಕೆ ಲಭ್ಯವಾಗದು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕತೆ ಬಹಳ ಕೆಳಮಟ್ಟಕ್ಕೆ ಹೋಗಬಹುದು.
ಕರ್ಕಾಟಕ ರಾಶಿ: ಹಳೆಯ ವಸ್ತುಗಳನ್ನು ಮಾರಾಟ ಮಾಡುವುದು ಕಷ್ಟ. ನಂಬಿಕೆ ಬರುವಂತೆ ಮಾತನಾಡಬೇಕು. ಸಂದೇಹದಿಂದ ಮನಸ್ಸು ಹಾಳಾಗುತ್ತದೆ. ಹಾಳಾದ ಮನಸ್ಸಿನಿಂದ ಕೆಲಸವೂ ಹಾಳು. ಗ್ರಾಹಕರಿಗೆ ಅನುಕೂಲವಾಗುವಂತೆ ನಡೆದುಕೊಳ್ಳುವಿರಿ. ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮನ್ನು ಗುರುತಿಸುವರು. ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಎನಿಸುವುದು. ಸ್ಪರ್ಧೆಯಲ್ಲಿ ಸೋಲನ್ನು ಒಪ್ಪಿಕೊಳ್ಳಲಾರಿರಿ. ಭೂಮಿಯ ವ್ಯವಹಾರವು ಪಾಲುದಾರರ ಸಹಕಾರದಿಂದ ಸುಗಮವಾಗಿ ಸಾಗಲಿದೆ. ಆರ್ಥಿಕ ಸಮಸ್ಯೆಯನ್ನು ಹೆಚ್ಚಿಸಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹಿಂದಿಸುವುದು ಕಷ್ಟವಾದೀತು. ನಿಮ್ಮ ಮಾತಿನಿಂದ ಸಂಗಾತಿಯು ಸಿಟ್ಟಾಗುವರು. ನಿಮ್ಮ ಕಡೆಯಿಂದ ಬಂಧುಗಳು ಅರ್ಥಿಕ ಸಹಾಯವನ್ನು ಕೇಳಲು ಹಿಂದೇಟು ಹಾಕುವರು. ಕೃಷಿಯಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆದಂತೆ ತೋರುವುದು. ಹಳೆಯ ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಬಂಧುಗಳ ಆಗಮನವು ಸಂತೋಷವನ್ನು ಕೊಡುವುದು.
ಸಿಂಹ ರಾಶಿ: ಮನೆಯವರ ದೃಷ್ಟಿಯಲ್ಲಿ ನೀವು ಸೋಮಾರಿಯಂತೆ ಆಗುವಿರಿ. ಸಿಟ್ಟನ್ನು ಮಾಡಿಕೊಳ್ಳುವುದು ಸರಿ ಎನಿಸಿದರೂ ಇದರಿಂದ ಆಗುವ ತೊಂದರೆಯಿಂದ ಸುಮ್ಮನಿರುವುದೇ ಒಳ್ಳೆಯದು. ಪ್ರವಾಸದಲ್ಲಿ ಇರುವವರಿಗೆ ಆಹಾರದ ವ್ಯತ್ಯಾಸದಿಂದ ಕಷ್ಟವಾಗುವುದು. ಸಂಶೋಧನೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯದಲ್ಲಿ ಪ್ರವೃತ್ತರಾಗುವರು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಯಶಸ್ಸು ಸಿಗುವುದು. ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಮಾತು ನಡೆಯುತ್ತದೆ ಎನ್ನುವ ಕಲ್ಪನೆ ಬೇಡ. ಆದಾಯಕ್ಕೆ ದೂರ ಪ್ರಯಾಣ ಅನಿವಾರ್ಯ ಆಗಬಹುದು. ವೃತ್ತಿಯ ಕೆಲಸಗಳ ನಡುವೆ ಮನೆಯ ಕೆಲಸವೂ ನಿಮಗೆ ಕಷ್ಟವಾದೀತು. ಪರಿಶ್ರಮವಿಲ್ಲದೇ ಆದಾಯವು ಸಿಗಲಿ ಎನ್ನುವ ಮನೋಭಾವ ಇರಲಿದೆ. ಮೇಲಧಿಕಾರಿಗಳ ಹೊಸ ಯೋಜನೆಯನ್ನು ನಿರ್ವಹಿಸಲು ನಿಮ್ಮ ತಲೆಗೆ ಬರುವುದು. ಸ್ತ್ರೀಯರ ಒಡನಾಟ ಅತಿಯಾಗುವುದು ಬೇಡ. ಪರರ ನೋವನ್ನು ಮರೆತು ಮುನ್ನಡೆಯಿರಿ.
ಕನ್ಯಾ ರಾಶಿ: ನಿಮ್ಮ ಹಳೆಯ ಅನುಭವಗಳು ಪಾಠವಾಗಲಿವೆ. ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣಬಹುದು. ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಬಂಧುಗಳ ಆಶ್ರಯದಲ್ಲಿ ಇಂದು ನೀವು ಇರಬೇಕಾದೀತು. ಸಂಗಾತಿಗೆ ನೀವು ಉತ್ತಮ ಕೆಲಸವು ಕೊಡಿಸುವಿರಿ. ಕಛೇರಿಯಲ್ಲಿ ನಿಮ್ಮ ಕಾರ್ಯವನ್ನು ಪ್ರಶಂಸಿಸಬಹುದು. ಕೆಟ್ಟ ಆಲೋಚನೆಗಳು ಬಂದರೂ ಅದನ್ನು ದೂರ ಮಾಡಿಕೊಳ್ಳುವ ತಂತ್ರವನ್ನು ತಿಳಿಯಿರಿ. ಹೂಡಿಕೆಯ ವಿಚಾರದಲ್ಲಿ ಯಾರಾದರೂ ಒತ್ತಾಯ ಮಾಡಬಹುದು. ದೂರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಮನೆಯ ನೆನಪಾಗಬಹುದು. ಆಲಂಕಾರಿಕ ಉದ್ಯಮವನ್ನು ಮಾಡಿದರೆ ಆದಾಯ ಸಿಗಲಿದೆ. ಮನೆಯ ಕೆಲಸವು ಮುಗಿಯದಷ್ಟು ಇರಲಿದ್ದು ಚಿಂತೆಯಾಗುವುದು. ಆಡಿದ ಮಾತನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ವಾಸ್ತವದಲ್ಲಿ ಜೀವಿಸುವುದನ್ನು ಕಲಿಯುವಿರಿ. ವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿಯಬೇಕಾದೀತು.
ತುಲಾ ರಾಶಿ: ನಿಮ್ಮ ಬಗ್ಗೆ ಹಿರಿಯರಿಂದ ಮನಸ್ತಾಪ ಕಾಣಿಸುವುದು. ನ್ಯಾಯಾಲಯದ ಹೋರಾಟಕ್ಕೆ ಸ್ನೇಹಿತರ ಬೆಂಬಲ ಸಿಗುವುದು. ಇಂದು ನಿಮಗೆ ನಿಮ್ಮವರುಲೇ ಬಯಸದೇ ಇದ್ದರೂ ಸಹಾಯ ಮಾಡುವವರಿದ್ದಾರೆ. ವಕೀಲವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿತಿರುವಿರಿ. ನಿಮ್ಮ ಪ್ರೀತಿ ಪಾತ್ರರು ನಿಮಗೆ ಉಡುಗೊರೆಯನ್ನು ಕೊಡಬಹುದು. ಸಂಗಾತಿಯ ಪ್ರೀತಿಯಿಂದ ಖುಷಿಯಾಗಲಿದೆ. ಮನಸ್ಸಿನಲ್ಲಿ ಹತಾಶೆ, ಗೊಂದಲಗಳಿಂದ ಏನನ್ನೂ ಮಾಡಲಾಗದ ಸ್ಥಿತಿಯು ಬರಲಿದೆ. ಹೊಸ ವಸ್ತುಗಳ ಖರೀದಿಗೆ ಉತ್ಸಾಹವು ಅಧಿಕವಾಗಿರಲಿದೆ. ಯಾರಾದರೂ ನಿಮಗೆ ಬೆಂಬಲವಾಗಬೇಕಿದೆ. ಮಾತನ್ನೂ ಕೇಳುವ ವ್ಯವಧಾನವೂ ನಿಮ್ಮಲ್ಲಿ ಇರದು. ಎಲ್ಲರ ಮಾತಿಗೂ ನಿಮ್ಮ ಕೋಪ ಮಾಡಿಕೊಳ್ಳುವಿರಿ. ನಿಮ್ಮ ಎಲ್ಲ ನಿರ್ಧಾರಗಳೂ ನಿಮಗೇ ನಕಾರಾತ್ಮಕವಾಗಿ ಇರುವಂತೆ ತೋರುವುದು. ನಿಮಗೆ ಸುಮ್ಮನೇ ಕುಳಿತರೇ ಹತ್ತಾರು ಆಲೋಚನೆಗಳಿಂದ ನಿಮ್ಮ ಮನಸ್ಸು ದುರ್ಬಲವಾಗುವುದು. ಸುಲಭವಾಗಿ ಇಂದು ಯಾವುದನ್ನೂ ಪಡೆಯುವುದು ಆಗದು.
ವೃಶ್ಚಿಕ ರಾಶಿ: ಕೃಷಿಯನ್ನು ಅವಲಂಬಿಸಿದವರಿಗೆ ಅತಂತ್ರ ಸ್ಥಿತಿ ಬರಲಿದೆ. ಎಲ್ಲವನ್ನೂ ಬಿಟ್ಟು ಸುಮ್ಮನಿದ್ದರೂ ಜೊತೆಗಾರರು ಸುಮ್ಮನಿರಲಾರರು. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಧಾರ್ಮಿಕ ಮುಖಂಡರಿಗೆ ಅಪವಾದ ಬರುವ ಸಾಧ್ಯತೆ ಇದೆ. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ಸಾಲದ ಕಾರಣಕ್ಕೆ ತಲೆ ಮರೆಸಿಕೊಳ್ಳಬಹುದು. ದಾಂಪತ್ಯ ಜೀವನದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಬರಲಿದ್ದು ಅದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾದೀತು. ವೃತ್ತಿಯ ಸ್ಥಳದಲ್ಲಿ ರೋಚಕ ಅನುಭವವು ಇರಲಿದೆ. ಅನ್ನಿಸಿದ್ದನ್ನು ಹೇಳಲು ನಿಮಗೆ ಅವಕಾಶವು ಸಿಗದೇ ಹೋಗಬಹುದು. ಕೆಲವವುದರಿಂದ ಬಿಡುಗಡೆಯಾದರೆ ಸಮಾಧಾನ. ಪ್ರೇಮಪ್ರಕರಣವು ಬಿಸಿಯ ತುಪ್ಪದಂತಾಗುವುದು. ಕೃಷಿಯಲ್ಲಿ ಆಸಕ್ತಿಯು ಹೆಚ್ಚಿರುವುದು. ದೂರದ ಬಂಧುಗಳ ಭೇಟಿಯ ನಿರೀಕ್ಷೆಯಲ್ಲಿ ಇರುವಿರಿ. ಪೂರ್ವಾಪರ ಯೋಚನೆ ಇಲ್ಲದೇ ಮಾತನಾಡಿ ಸಂಬಂಧವನ್ನು ಹಾಳುಮಾಡಿಕೊಳ್ಳಬೇಡಿ.
ಧನು ರಾಶಿ: ಸ್ತ್ರೀಯರು ಸ್ಥಾನವನ್ನು ಉಳಿಸಿಕೊಳ್ಳುವ ಬಗೆಯನ್ನು ಚಿಂತಿಸುವರು. ಹಿತಶತ್ರುಗಳಿಂದ ನಿಮಗೆ ನೆಮ್ಮದಿ ಕಡಿಮೆಯಾಗಬಹುದು. ಇಕ್ಕಟ್ಟಿನಿಂದ ಹೊರಬರಲು ಮನಸ್ಸು ಮಾಡುವಿರಿ. ಆದರೂ ಕಷ್ಟವಾದೀತು. ಕುಟುಂಬದ ಸದಸ್ಯರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆಪ್ತರ ಒಡನಾಟವು ಖುಷಿಯನ್ನು ಕೊಡಬಹುದು. ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮಂದಗತಿ ಇರುವುದು. ನಂಬಿಕೆಯನ್ನು ಉಳಿಸಿಕೊಳ್ಳಲು ಕಷ್ಟವಾದೀತು. ನಿಮ್ಮ ಬಳಿ ಕೇಳಿದರೆ ಮಾತ್ರ ಸಲಹೆಯನ್ನು ಕೊಡಿ. ತಂದೆಯ ಕೋಪವನ್ನು ನೀವು ಸಮಾಧಾನ ಮಾಡುವಿರಿ. ವಿರೋಧಿಗಳು ಸೃಷ್ಟಿಯಾಗಬಹುದು. ಶುಭ ಸಮಾರಂಭಗಳಿಗೆ ಭೇಟಿ ಮಾಡುವಿರಿ. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ಇಂದು ನೀವು ಯಾವುದೋ ಚಿಂತೆಯಲ್ಲಿ ಇರುವಿರಿ. ಹೂಡಿಕೆದಾರರಿಗೆ ಮೇಲಿಂದಮೇಲೆ ಒತ್ತಡ ಕಾಣಿಸುವುದು.
ಮಕರ ರಾಶಿ: ನಿಮ್ಮ ಸ್ವಭಾವವನ್ನು ಬದಲಾಯಸುವ ಪ್ರಯತ್ನ ನಡೆಯುವುದು. ನಿಮ್ಮ ಹಳೆಯ ನೌಕರರನ್ನು ಕೈಬಿಡುವ ಯೋಚನೆ ಮಾಡುವಿರಿ. ಇಂದು ನಿಮ್ಮ ಆಲೋಚನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇದ್ದು ಉತ್ಸಾಹದಿಂದ ಇರುವಿರಿ. ವಾಹನವನ್ನು ಚಲಾಯಿಸುವ ಬೇರೆಯ ಯಾವ ಚಟುವಟಿಕೆಗಳನ್ನು ಮಾಡುವುದು ಬೇಡ. ನಿಮ್ಮ ಕುಶಲ ಕಾರ್ಯಗಳು ಮೇಲಧಿಕಾರಿಗಳಿಗೆ ತಿಳಿಯುವುದು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ತಾಯಿಗೆ ಏನಾದರೂ ಕೊಟ್ಟು ಖಷಿಪಡಿಸುವಿರೊ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳದೇ ಇರುವ ಹಲವು ವಿಚಾರಗಳು ಸ್ನೇಹಿತರು ಹೇಳುವರು. ಸಂಗಾತಿಗೆ ನೀವು ಸಹಾಯವನ್ನು ಮಾಡುವಿರಿ. ಸಂಪತ್ತಿನ ಉಳಿತಾಯದ ದಾರಿಯನ್ನು ನೀವೇ ಕಂಡುಕೊಳ್ಳುವಿರಿ. ಮುಚ್ಚು ಮರೆ ಇಲ್ಲದೇ ಎಲ್ಲವನ್ನೂ ಆಪ್ತರ ಜೊತೆ ಹಂಚಿಕೊಳ್ಳಿ. ಶಿಸ್ತುಬದ್ಧವಾದ ವ್ಯವಹಾರದಿಂದ ನಿಮಗೆ ಹೊಗಳಿಕೆ ಸಿಗುವುದು. ದೇಹ ಬಾಧೆಗೆ ಯೋಗ್ಯವಾದ ಮದ್ದನ್ನು ಮಾಡಿ.
ಕುಂಭ ರಾಶಿ: ನಿಮ್ಮ ಭವಿಷ್ಯಕ್ಕೆ ಗ್ರಹಣ ಹಿಡಿದಂತೆ ಆಗುವ ಸಾಧ್ಯತೆ ಇದೆ. ಒತ್ತಡದ ಕಾರಣ ಕೆಲವನ್ನು ನೀವು ಬಿಡಬೇಕಾಗುವುದು. ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಬಂಗಾರದ ಖರೀದಿಗೆ ಉತ್ಸಾಹವನ್ನು ತೋರುವಿರಿ. ಅಸಾಧ್ಯವಾದ ಕಾರ್ಯವನ್ನು ಮಾಡಬೇಕು ಎನಿಸಬಹುದು. ಬರುವ ಅಲ್ಪ ಆದಾಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಕುಟುಂಬದ ಪ್ರೀತಿಯು ಸಿಗಲಿದೆ. ದುಡುಕುವುದು ಕಾರ್ಯದ ನಿಮಿತ್ತ ಓಡಾಟವು ಹೆಚ್ಚಾಗುವುದು. ಬಂಧುಗಳಿಂದ ಸಲ್ಲದ ಮಾತುಗಳನ್ನು ಕೇಳುವಿರಿ. ಆಲಸ್ಯದಿಂದ ನಿಮ್ಮ ಎಲ್ಲ ಕಾರ್ಯಗಳೂ ಉಳಿಯಬಹುದು. ಯಾವುದನ್ನೂ ನೀವು ಅತಿಯಾಗಿ ಆಸೆ ಪಡುವುದು ಬೇಡ. ನಿಮ್ಮ ಪರೀಕ್ಷೆಯ ಕಾಲವೂ ಇಂದು ಆಗಿರುವುದು. ಆಪ್ತರ ಮೇಲೆ ಹುಸಿ ಮುನಿಸು ಇರಲಿದೆ. ಅಗ್ನಿ ಅಥವಾ ಅಗ್ನಿಗೆ ಸಂಬಂಧಿಸಿದ ವಸ್ತುವಿನಿಂದ ನಿಮಗೆ ಭಯವು ಕಾಡುವುದು.
ಮೀನ ರಾಶಿ: ಲೆಕ್ಕ ಪರಿಶೀಲಕರಿಗೆ ಒತ್ತಡವಿರುವುದು. ನಿಮ್ಮ ಜೀವನಕ್ಕೆ ಕಾರಣರಾದವರನ್ನು ಕೃತಜ್ಞತೆಯಿಂದ ಸ್ಮರಿಸುವಿರಿ. ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಸ್ನೇಹಿತರ ಉತ್ಸಾಹದ ಮಾತಿಗೆ ಮರುಳಾಗುವ ಸಾಧ್ಯತೆ ಇದೆ. ಪ್ರೇಮಿಯನ್ನು ಭೇಟಿಯಾಗಲು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ಮಕ್ಕಳಿಂದ ಹಣವನ್ನು ಪಡೆಯುವಿರಿ. ಇಂದು ಮಾತುಗಳನ್ನು ಕಡಿಮೆ ಆಡುವಿರಿ. ಕೂಗಾಡುವುದರಿಂದ ಶಕ್ತಿ ಕಷ್ಟವಾಗಬಹುದು. ಸಂಪತ್ತಿನ ನಿರ್ವಹಣೆಯಲ್ಲಿ ಸೋಲಬಹುದು. ಅಪರಿಚಿತರು ನಿಮ್ಮನ್ನು ಭೇಟಿಯಾಗಬಹುಸು. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ. ಕೃಷಿಯಲ್ಲಿ ನಿಮಗೆ ಇಂದು ನಿರಾಸಕ್ತಿಯು ಇರುವುದು. ಸುಮ್ಮನೇ ಇದ್ದಷ್ಟೂ ನಿಮ್ಮ ಮೇಲೆ ಗೂಬೆ ಕೂರಿಸಬಹುದು. ತಂತ್ರಜ್ಞಾನದಲ್ಲಿ ನಿಮಗೆ ಒಳ್ಳೆಯ ಹಿಡಿತ ಗೊತ್ತಾಗುವುದು.