ಭಟ್ಕಳ: ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆ ಭಟ್ಕಳ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ತಿರಂಗಾ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ನವಾಯತ್ ಕಾಲೊನಿಯಲ್ಲಿರುವ ವೇಲ್ಪೇರ್ ಕಚೇರಿಯಿಂದ ಆರಂಭಗೊಂಡ ಬೈಕ್ ರ್ಯಾಲಿ ಶಮ್ಶುದ್ದೀನ್ ಸರ್ಕಲ್ ಮಾರ್ಗವಾಗಿ ಅಮೀನುದ್ದೀನ್ ರಸ್ತೆಯಿಂದ ಪುನಃ ಪಕ್ಷದ ಕಚೇರಿಯಲ್ಲಿ ಮುಕ್ತಾಯವಾಯಗೊಂಡಿತು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರು ಮಜಿದ್ ಕೋಲಾ, ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಖ್, ರಾಜ್ಯ ಮಾಧ್ಯಮ ಉಸ್ತುವಾರಿ ಅಜೀಜ್ ಜಾಗೀರದಾರ, ಜಂಟಿ ಕಾರ್ಯದರ್ಶಿ ಅಸ್ಲಂ ಶೇಖ್, ಖಜಾಂಚಿ ಅಬ್ದುಲ್ ಜಬ್ಬಾರ್ ಅಸದ್, ಮಾಜಿ ಅಧ್ಯಕ್ಷ ಫಾರೂಕ್ ಶೇಖ್, ಸದಸ್ಯರಾದ ಅಸಿಮ್ ಅಫಂಡಿ, ಜಹೂರ್ ಲಾತ್ ಹಾಗೂ ಸಾಹಿದ್ ಉಪಸ್ಥಿತರಿದ್ದರು.