ಬಲೂನ್ ಗಂಟಲಲ್ಲಿ ಸಿಲುಕಿ 13 ವರ್ಷದ ವಿದ್ಯಾರ್ಥಿ ಸಾವು

ಹಳಿಯಾಳ : ಮನೆಯಲ್ಲಿ ಆಟವಾಡುತ್ತಾ ಬಲೂನ್ ಊದಲು ಹೋಗಿ ಗಂಟಲಲ್ಲಿ ಸಿಲುಕಿ 13 ವರ್ಷದ ಬಾಲಕ ಉಸಿರುಗಟ್ಟಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ವಿದ್ಯಾರ್ಥಿ ನವೀನ ನಾರಾಯಣ ಬೆಳಗಾಂವಕರ(13) ಸಾವಿಗಿಡಾದ ಬಾಲಕನಾಗಿದ್ದಾನೆ. ಮನೆಯಲ್ಲಿ ಆಟವಾಡುತಿದ್ದ ವೇಳೆ ಬಲೂನ್ ಊದುವಾಗ ಬಾಯಿಯ ಒಳಗೆ ಕೈ ತಪ್ಪಿ ಜಾರಿ ಹೋಗಿ ಗಂಟಲಲ್ಲಿ ಸಿಲುಕಿದೆ. ಉಸಿರುಗಟ್ಟಿ ಒದ್ದಾಡುತಿದ್ದ ಈತನಿಗೆ ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಉಸಿರಾಟವಾಡಲು ಸಾಧ್ಯವಾಗದೇ ಸಾವು ಕಂಡಿದ್ದಾನೆ.

ಹಳಿಯಾಳದ ಸರ್ಕಾರಿ ಆಸ್ಪತ್ರೆ ವೈದ್ಯರು ಗಂಟಲಲ್ಲಿ ಸಿಲುಕಿದ್ದ ಬಲೂನ್ ನನ್ನು ತೆಗೆದಿದ್ದಾರೆ.ಆದರೇ ಆ ಬಾಲಕ ಆಸ್ಪತ್ರೆ ಕರೆತರುವ ವೇಳೆಯೇ ಸಾವು ಕಂಡಿದ್ದಾನೆ. ಪೋಷಕರೇ ಎಚ್ಚರ ಮಕ್ಕಳಿಗೆ ಯಾವುದೇ ವಸ್ತುಗಳನ್ನು ಕೊಡುವ ಮುಂಚಿ ಎಚ್ಚರದಿಂದ ಮಾಹಿತಿ ನೀಡಿ ಕೊಡಬೇಕು , ಇಲ್ಲವಾದರೇ ಒಂದಲ್ಲಾ ಒಂದು ರೀತಿಯಲ್ಲಿ ಮಕ್ಕಳ ಜೀವಕ್ಕೆ ಕುತ್ತಾಗಲಿದೆ.