ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

ಬೆಂಗಳೂರು: ನವರಾತ್ರಿ, ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ವಾಣಿಜ್ಯ ಸಿಲಿಂಡರ್ ಬಳಕೆದಾರರ ಜೇಬು ಮತ್ತೆ ಭಾರವಾಗಲಿದೆ. ಕಾರಣ ಮತ್ತೆ ವಾಣಿಜ್ಯ ಸಿಲಿಂಡರ್ ದರ ಏರಿಕೆಯಾಗಿದ್ದು, ತಿಂಗಳ ಮೊದಲ ದಿನವೇ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿತಾಗಿದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ.

ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡ‌ರ್ ಬೆಲೆಯನ್ನು ಹೆಚ್ಚಿಸಿ ನವರಾತ್ರಿ ಹೊತ್ತಲ್ಲಿ ಗ್ರಾಹಕರಿಗೆ ಶಾಕ್ ನೀಡಿದೆ. 19 ಕೆಜಿ ಎಲ್‌ ಪಿಜಿ ಸಿಲಿಂಡರ್ ಬೆಲೆ 48.50 ರೂಪಾಯಿ ಹೆಚ್ಚಿಸಲಾಗಿದೆ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 1,740 ರೂಪಾಯಿ ಆಗಿದೆ. ಕಂಪೆನಿಗಳು ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಮೊದಲಿನಂತೆ ದೆಹಲಿಯಲ್ಲಿ 803 ರೂಪಾಯಿಗೆ ಲಭ್ಯವಿರುತ್ತದೆ.

ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ ಪಿಜಿ ಸಿಲಿಂಡ‌ರ್ ಬೆಲೆಯು 48.50 ರೂಪಾಯಿ ಬೆಲೆ ಏರಿಕೆ ಕಂಡುಬಂದಿದ್ದು 1,818 ರೂಪಾಯಿಗೆ ತಲುಪಿದೆ. ಬೆಲೆ ಪರಿಷ್ಕರಣೆಗೂ ಮೊದಲು ಬೆಲೆಯು 19 KG ಪ್ರತಿ ಸಿಲಿಂಡರ್‌ಗೆ 1,769.50 ರೂಪಾಯಿಗಳಷ್ಟಿತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಸುಮಾರು 50 ರೂಪಾಯಿ ಹೆಚ್ಚಿಸಲಾಗಿದ್ದು ಇಂದಿನಿಂದ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ 1740 ರೂಪಾಯಿ ಆಗಿದೆ ಈ ದರ ಇಂಡೇನ್ ಸಿಲಿಂಡರ್ ಆಗಿದೆ ಇಲ್ಲಿ ಗೃಹಬಳಕೆಯ ಎಲ್‌ ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.